ಒಗ್ಗಟ್ಟಿನ ಬದುಕು ನಮ್ಮದಾಗಬೇಕು: ಹಾಫಿಝ್ ಸುಫ್ಯಾನ್ ಸಖಾಫಿ
ಉಳ್ಳಾಲ: ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ನಮ್ಮ ದೇಶಕ್ಕೆ 26 ವಿಭಾಗಗಳು ವ್ಯಾಪಾರದ ಉದ್ದೇಶ ದಿಂದ ಬಂದು ಇಲ್ಲಿಯೇ ಠಿಕಾಣಿ ಹೂಡಲೆತ್ನಿಸಿದರು. ಇವರ ವಿರುದ್ಧ ಹೋರಾಟ ಕೂಡಾ ನಡೆಯಿತು.ಆದರೆ ಭಾರತೀಯರಾದ ನಾವು ಯಾವುದೇ ದೇಶದ ಮೇಲೆ ಕಣ್ಣಿಡಲಿಲ್ಲ,ಕೊಳ್ಳೆ ಹೊಡೆಯಲು ಹೋಗಲಿಲ್ಲ. ಬಹಳಷ್ಟು ಜಾತಿ ಧರ್ಮ ಗಳು ಇಲ್ಲಿದ್ದರೂ ಒಗ್ಗಟ್ಟಿನ ಬದುಕು ನಮ್ಮದಾಗಬೇಕು. ಅಂಬೇಡ್ಕರ್ ಬರೆದ ಸಂವಿಧಾನ ದಲ್ಲಿ ಭಾರತೀಯ ಜನತೆಯಾದ ನಾವು ಎಂಬ ವಾಕ್ಯ ದ ಮೂಲಕ ಆರಂಭಿಸಲಾಗಿದೆ. ಈ ಸಂವಿಧಾನ ವನ್ನು ಪಾಲಿಸಿಕೊಂಡು ಬರಬೇಕಾದ ಜವಾಬ್ದಾರಿ ನಮ್ಮದು ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಹೇಳಿದರು
ಅವರು ಕರ್ನಾಟಕ ಮುಸ್ಲಿಂ ಜಮಾಅತ್ , ಎಸ್ ವೈ ಎಸ್ ಮತ್ತು ಎಸ್ಸೆಸ್ಸೆಫ್ ಅಳೇಕಲ ಯುನಿಟ್ ವತಿಯಿಂದ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಪ್ರಯುಕ್ತ ತೊಕ್ಕೋಟ್ಟು ಬಸ್ ತಂಗುದಾಣ ಬಳಿ ಶುಕ್ರವಾರ ನಡೆದ ಪೀಪಲ್ ಕಾನ್ಫರೆನ್ಸ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಸಲಾಹುದ್ದೀನ್ ಹಿಮಮಿ ದುಆ ನೆರವೇರಿಸಿದರು. ಕೆಎಂಜೆ ಅಳೇಕಲ ಯುನಿಟ್ ಅಧ್ಯಕ್ಷ ಯು.ಎಸ್ ಹಂಝ ಕಾರ್ಯಕ್ರಮ ಉದ್ಘಾಟಿಸಿದರು. ಮರ್ಕಝ್ ಲಾ ಕಾಲೇಜು ವಿದ್ಯಾರ್ಥಿ ಅಸ್ಲಾಂ ಮಾತನಾಡಿದರು. ಎಸ್ ವೈ ಎಸ್ ಅಳೇಕಲ ಯುನಿಟ್ ಕಾರ್ಯದರ್ಶಿ ಅನ್ಸಾರ್ ಮಲಿಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.