ವಧು-ವರರ ಅನ್ವೇಷಣೆ ಕ್ರಾಂತಿಕಾರಿ ಹೆಜ್ಜೆ| ಯುವವಾಹಿನಿ ಕಾರ್ಯಕ್ಕೆ ಕೋಟ ಶ್ರೀನಿವಾಸ ಪೂಜಾರಿ ಶ್ಲಾಘನೆ
ಮಂಗಳೂರು: ವಧು-ವರರ ಅನ್ವೇಷಣೆ ಯುವವಾಹಿನಿಯ ಕ್ರಾಂತಿಕಾರಿ ಹೆಜ್ಜೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ರವಿವಾರ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಬಿಲ್ಲವ ವಧು-ವರರ ಅನ್ವೇಷಣೆ-2024 ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಪರಸ್ಪರ ಹೊಂದಾಣಿಕೆಯಿಂದ ದಾಂಪತ್ಯ ಜೀವನ ಯಶಸ್ಸು ಸಾಧ್ಯ ಎಂದರು. ಕೇಂದ್ರದ ಸಚೇತಕರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗೌರವಿಸಲಾಯಿತು.
ಯುವವಾಹಿನಿ ಮಹಿಳಾ ಘಟಕ ಅಧ್ಯಕ್ಷೆ ಶುಭಾರಾಜೆಂದ್ರ ಚಿಲಿಂಬಿ ಅಧ್ಯಕ್ಷತೆ ವಹಿಸಿದ್ದರು. ಯುವವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ.ಪೂಜಾರಿ, ಬಿಲ್ಲವಾಸ್ ಫ್ಯಾಮಿಲಿ ದುಬೈ ಅಧ್ಯಕ್ಷ ದೀಪಕ್ ಎಸ್., ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೇರ, ಮಂಗಳೂರು ದಕ್ಷಿಣ ಇನ್ನರ್ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಪ್ರಮೋದಾ ಸತೀಶ್ ಬೋಳಾರ್, ಸಮಾಜಸೇವಕಿ ಹಿತಾ ಪ್ರವೀಣ್, ಯುವವಾಹಿನಿ ಸಂಚಾಲಕಿ ವಿದ್ಯಾ ರಾಕೇಶ್ ಮೊದಲಾದವರಿದ್ದರು.
ಯುವವಾಹಿನಿ ಸಮಾಜಸೇವೆ ನಿರ್ದೇಶಕಿ ಊರ್ಮಿಳಾ ಸ್ವಾಗತಿಸಿದರು. ಅಮಿತಾಗಣೇಶ್ ವಂದಿಸಿದರು. ಪ್ರಜ್ಞಾ ಒಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ಸುಮಾರು 500ರಷ್ಟು ಮಂದಿ ಹೆಸರು ನೋಂದಾಯಿಸಿದರು.