ಅ.3: ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದಿಂದ ಬ್ಯಾರಿ ಭಾಷಾ ದಿನಾಚರಣೆ
ಮಂಗಳೂರು: ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದಿಂದ ಅ.3ರ ಸಂಜೆ 4.30 ಕ್ಕೆ ನಗರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ಕಣಚೂರು ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ.ಯು.ಕೆ. ಮೋನು ಕಣಚೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉದ್ಯಮಿ ಬಿ.ಎಂ. ಶರೀಫ್ ಲಾಂಛನ ಅನಾವರಣ ಮಾಡಲಿದ್ದಾರೆ.
ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಲಿದ್ದು, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್. ಚಲನಚಿತ್ರ ನಟ ಡಾ. ದೇವದಾಸ್ ಕಾಫಿಕಾಡ್, ಉದ್ಯಮಿಗಳಾದ ಮನ್ಸೂರ್ ಅಹ್ಮದ್ ಆಝಾದ್, ಮೋಹನ್ ಬೆಂಗ್ರೆ, ಯು.ಬಿ. ಮುಹಮ್ಮದ್, ಕೊಂಕಣಿ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕಾಸ್ಟಲಿನೊ, ಅಬ್ದುಲ್ ಸತ್ತಾರ್ ಆರಂಗಳ, ಕಾರ್ಪೊರೇಟರ್ ಅಬ್ದುಲ್ ಲತೀಫ್ , ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಮೋಹನ್ ಪ್ರಸಾದ್, ಮುಹಮ್ಮದ್ ಕುಕ್ಕುವಳ್ಳಿ, ಬಶೀರ್ ಎ.ಕೆ., ಹಕೀಮ್ ಫಾಲ್ಕಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಾಹಿತಿ ಮುಹಮ್ಮದ್ ಬಡ್ಡೂರು, ಪ್ರೊ. ಇಬ್ರಾಹೀಂ ಬ್ಯಾರಿ, ಇಸ್ಮಾಯಿಲ್ ಮೂಡುಶೆಡ್ಡೆ, ಸತೀಶ್ ಸುರತ್ಕಲ್, ರಹೀಮ್ ಬಿ.ಸಿ.ರೋಡ್ ಅವರನ್ನು ಸನ್ಮಾನಿಸಲಾಗುವುದು. ಸಂಜೆ 6.30ರಿಂದ ಬ್ಯಾರಿ ಸಂಗೀತ ರಸಮಂಜರಿ, ಬ್ಯಾರಿ ಕವ್ವಾಲಿ, ಕಿರು ಹಾಸ್ಯ ಪ್ರಹಸನಗಳು ಪ್ರದರ್ಶನಗೊಳ್ಳಲಿದೆ. ಬ್ಯಾರಿ, ತುಳು, ಕೊಂಕಣಿ, ಕನ್ನಡ, ಮಲಯಾಳಂ, ಹಿಂದಿ, ಗೀತೆಗಳ ಬಹುಭಾಷಾ ಸಂಗೀತ ಸೌಹಾರ್ದ ಸಂಗಮ ಎಂದು ಪ್ರಕಟನೆ ತಿಳಿಸಿದೆ.