ಅ.31: ಯೆನೆಪೋಯ ಫಾರ್ಮಸಿ ಕಾಲೇಜು ಸಂಶೋಧನಾ ಕೇಂದ್ರದ ಪದವಿ ಪ್ರದಾನ
ಮಂಗಳೂರು, ಅ. 27: ಯೆನೆಪೋಯ ಫಾರ್ಮಸಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ 2ನೇ ಪದವಿ ಪ್ರದಾನ ಸಮಾರಂಭ ಹಾಗೂ ಅಲುಮ್ನಿ ಸಭೆ ಅ.31ರಂದು ನಡೆಯಲಿದೆ.
ದೇರಳಕಟ್ಟೆಯ ಯೆನೆಪೋಯ ಯೆಂಡೂರೆನ್ಸ್‌ನಲ್ಲಿ ಬೆಳಗ್ಗೆ 8.30ರಿಂದ ಮಧ್ಯಾಹ್ನ 3.30ರವರೆಗೆ ಪದವಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕೇಂದ್ರದ ಪ್ರಾಂಶುಪಾಲರು ಹಾಗೂ ಡೀನ್ ಡಾ. ಮುಹಮ್ಮದ್ ಗುಲ್ಜಾರ್ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಯೆನೆಪೋಯ ಫಾರ್ಮಸಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರವು ಫಾರ್ಮಸಿ ಕ್ಷೇತ್ರದಲ್ಲಿ ಅಸಾಧಾರಣ ಶಿಕ್ಷಣ ಹಾಗೂ ಸಂಶೋಧನಾ ಅವಕಾಶವನ್ನು ಒದಗಿಸಲು ಸಮರ್ಪಿಸಲಾಗಿದೆ. ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹಾಗೂ ಭವಿಷ್ಯದ ನಾಯಕರನ್ನು ಪೋಷಿಸುವ ಬದ್ಧತೆಯನ್ನು ಹೊಂದಿದೆ ಎಂದರು.
ಮೈಸೂರು ಜೆಎಸ್‌ಎಸ್ ಕಾಲೇಜು ಫಾರ್ಮಸಿಯ ಪ್ರಾಂಶುಪಾಲರು ಹಾಗೂ ಡೀನ್ ಡಾ.ಟಿ.ಎಂ ಪ್ರಮೋದ್ ಕುಮಾರ್, ಬೆಂಗಳೂರಿನ ಎಂಬೊಯಟಿಕ್ ಲ್ಯಾಬೊರೇಟರೀಸ್‌ನ ನಿರ್ದೇಶಕ ಹರೀಶ್ ಕೆ.ಜೈನ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಯೆನೆಪೋಯ ಫಾರ್ಮಸಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಫಾರ್ಮ ಕಾಲೊಜಿ ವಿಭಾಗ ಮುಖ್ಯಸ್ಥೆ ಡಾ.ಸಿಂಧು ಪ್ರಿಯಾ ಇ.ಎಸ್. ಮಾತನಾಡಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದವರಿಗೆ ಚಿನ್ನದ ಪದಕವನ್ನು ಪ್ರದಾನಿಸಲಾಗುವುದು. ಫಾರ್ಮಸಿ ಕ್ಷೇತ್ರದಲ್ಲಿ ಗಮನಾರ್ಹ ಪ್ರಭಾವ ಬೀರಿದ ಅಲುಮ್ನಿಗಳಿಗೆ ಅಲುಮ್ನಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಟೆಡ್ ಪ್ರೊಫೆಸರ್ ಹಾಗೂ ಫಾರ್ಮಾಸ್ಯುಟಿಕ್ಸ್ ವಿಭಾಗ ಮುಖ್ಯಸ್ಥೆ ಡಾ.ಆಯೆಷಾ ಸುಲ್ತಾನ, ಸ್ಟೂಡೆಂಟ್ ಕೌನ್ಸಿಲ್ ಕಮಿಟಿ ಉಪಾಧ್ಯಕ್ಷ ಮುಹಮ್ಮದ್ ಸಾಯಿಲ್ ಉಪಸ್ಥಿತರಿದ್ದರು.