ಮುಡಿಪು, ದೇರಳಕಟ್ಟೆ, ಬಂಟ್ವಾಳ ಸುನ್ನಿ ಸಂಯುಕ್ತ ಜಮಾಅತ್ ಖಾಝಿಯಾಗಿ ಎ.ಪಿ.ಉಸ್ತಾದ್ ಹೊಣೆಗಾರಿಕೆ ಸ್ವೀಕಾರ

ದೇರಳಕಟ್ಟೆ, ಆ.18: ಮುಡಿಪು, ದೇರಳಕಟ್ಟೆ, ಬಂಟ್ವಾಳ ಸುನ್ನಿ ಸಂಯುಕ್ತ ಜಮಾಅತ್ ಖಾಝಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೊಣೆಗಾರಿಕೆ ಸ್ವೀಕಾರ ಕಾರ್ಯಕ್ರಮ ಶನಿವಾರ ಸಾಂಬಾರತೋಟ ದಲ್ಲಿ ಜರುಗಿತು.
ಈ ಸಂದರ್ಭ ಮಾತನಾಡಿದ ಎ.ಪಿ.ಉಸ್ತಾದ್, ಹಿರಿಯರ, ನನ್ನ ಗುರುಗಳ ಆಶೀರ್ವಾದ ನನಗಿದೆ. ಅವರ ಆಶೀರ್ವಾದ ಇದ್ದ ಕಾರಣ ಶೈಕ್ಷಣಿಕ ಕೇಂದ್ರ , ಧಾರ್ಮಿಕ ಶಿಕ್ಷಣ ಕಡೆ ಹೆಚ್ಚು ಒತ್ತು ನೀಡಿದ್ದೇನೆ. ಶಿಕ್ಷಣ ರಂಗದಲ್ಲಿ ಮುಸ್ಲಿಮರು ಮುಂದುವರಿಯಬೇಕು.ಅಭಿವೃದ್ಧಿ ಕಾಣಬೇಕು ಎಂಬ ಗುರಿ ನನಗಿದೆ.ಈ ಕಾರಣದಿಂದ ಈ ಖಾಝಿ ಸ್ಥಾನ ಸ್ವೀಕಾರ ಮಾಡಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹುಸೈನ್ ಸಅದಿ ಕೆ.ಸಿ.ರೋಡ್ ಇಸ್ಲಾಮಿ ನಲ್ಲಿ ಖಾಝಿ ಸ್ಥಾನಕ್ಕೆ ಇರುವ ಗೌರವ, ಜವಾಬ್ದಾರಿಯ ಬಗ್ಗೆ ವಿವರಿಸಿದರು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ ಶುಭ ಹಾರೈಸಿದರು.
ಸಮಸ್ತ ಕೇರಳ ಜಂಇಯತುಲ್ ಉಲಮಾ ಅಧ್ಯಕ್ಷ ರ ಈಸುಲ್ ಉಲಮಾ ಇ.ಸುಲೈಮಾನ್ ಮುಸ್ಲಿಯಾರ್ ಧಾರ್ಮಿಕ ಉಪನ್ಯಾಸ ನೀಡಿದರು.
ಸೈಯದ್ ಇಂಬಿಚ್ಚಿಕೋಯ ತಂಙಳ್ ದುಆ ನೆರವೇರಿಸಿದರು. ಮರ್ಕಝ್ ವೈಸ್ ಚಾನ್ಸೆಲರ್ ಹುಸೈನ್ ಸಖಾಫಿ ಚುಳ್ಳಿಕೋಡ್ ಮಾತನಾಡಿದರು. ಉಮರ್ ಸಖಾಫಿ ತೆಲಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಆದೂರು ಅಶ್ರಫ್ ತಂಙಳ್, ಶರ್ಫುದ್ದೀನ್ ತಂಙಳ್, ಮಸೂದ್ ತಂಙಳ್ ಕೂರತ್, ದಾರುಲ್ ಅಶರಿಯ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ, ಎಸ್.ಪಿ.ಹಂಝ ಸಖಾಫಿ, ಅಲೈಡ್ ಹೆಲ್ತ್ ಸೈನ್ಸ್ ಕೌನ್ಸಿಲ್ ರಾಜ್ಯ ಅಧ್ಯಕ್ಷ ಯು.ಟಿ.ಇಫ್ತಿಕಾರ್ ಅಲಿ, ಎಸ್.ಕೆ.ಖಾದರ್ ಹಾಜಿ ಮುಡಿಪು, ಶಾಫಿ ಸಅದಿ ಬೆಂಗಳೂರು, ಅಬ್ದುಲ್ ರಶೀದ್ ಝೈನಿ, ನಿವೃತ್ತ ಡಿವೈಎಸ್ಪಿ ಜಿ.ಎ.ಬಾವಾ, ವಕ್ಫ್ ಬೋರ್ಡ್ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಮೂಸಲ್ ಮದನಿ ತಲಕ್ಕಿ, ಹಕೀಂ ಅಝ್ಹರಿ, ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಸಿದ್ದೀಕ್ ಮೋಂಟುಗೋಳಿ, ಎಂ.ಬಿ.ಮಹಮ್ಮದ್ ಸಖಾಫಿ, ಮುಹಮ್ಮದ್ ಅಲಿ ಸಖಾಫಿ ಬಾಳೆಪುಣಿ, ಆಲಿ ಕುಂಞಿ ಪಾರೆ ಮತ್ತಿತರರು ಉಪಸ್ಥಿತರಿದ್ದರು.
ಮುಡಿಪು ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಂ.ಬಿ.ಅಬೂಬಕರ್ ಸಖಾಫಿ ಸ್ವಾಗತಿಸಿದರು. ಮುಹಮ್ಮದ್ ಮದನಿ ಸಾಮಣಿಗೆ ವಂದಿಸಿದರು.