ಅಡ್ಯಾರ್: ಬರಕ ಶಿಕ್ಷಣ ಸಂಸ್ಥೆಯಲ್ಲಿ ಪ್ರೆಪ್ ಗ್ರಾಜುಯೇಷನ್ ಕಾರ್ಯಕ್ರಮ

ಬರಕ ಇಂಟರ್ ನ್ಯಾಷನಲ್ ಶಾಲೆ ಮತ್ತು ಕಾಲೇಜಿನಲ್ಲಿ ಫೆ.8 ಶನಿವಾರದಂದು ಪ್ರೆಪ್ ಗ್ರಾಜುಯೇಷನ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಕ್ರೈಂ ಬ್ರಾಂಚಿನ ಪೊಲೀಸ್ ಅಧಿಕಾರಿ ರಫೀಕ್ ಕೆ.ಎಂ ಅವರು ಮಕ್ಕಳಿಗೆ ಅರ್ಹತಾ ಪತ್ರಗಳನ್ನು ವಿತರಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಬರಹಗಾರ ಮುಹಮ್ಮದ್ ಅಲಿ ಕಮ್ಮರಡಿ, ಪತ್ರಕರ್ತ ಆರಿಫ್ ಪಡುಬಿದ್ರಿ, ಸಾಮಾಜಿಕ ಕಾರ್ಯಕರ್ತ ಅಹ್ಮದ್ ಕುಂಞಿ ಮಾಸ್ಟರ್, ಹಸೈನಾರ್ ಬಾರೆಬೆಟ್ಟು, ಸಿದ್ದಿಕ್ ಶರವು ಅವರು ಬರಕ ವಿದ್ಯಾ ಸಂಸ್ಥೆ ಕಳೆದ ದಶಕದಿಂದ ನಡೆಸುತ್ತಿರುವ ಅತ್ಯಂತ ಮೌಲ್ಯಯುತವಾದ ಶೈಕ್ಷಣಿಕ ಸೇವೆಯ ಬಗ್ಗೆ ಅವರು ಪ್ರಶಂಸೆಯ ಮಾತುಗಳನ್ನಾಡಿದರು.
ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ರವರು ಮಾತನಾಡಿ ಈ ಪ್ರದೇಶದ ವಿಧ್ಯಾರ್ಥಿಗಳ ಸರ್ವ ವಿಧ ಪ್ರಗತಿಗೆ ನಮ್ಮ ಸಂಸ್ಥೆ ಸದಾ ಕಟಿಬದ್ಧವಾಗಿ ಸೇವೆ ಸಲ್ಲಿಸಲಿದೆ ಎಂದರು. ಪ್ರಾಂಶುಪಾಲ ಶರ್ಫುದ್ದೀನ್ ಬಿ.ಯಸ್ ಸ್ವಾಗತಿಸಿದರು ಮತ್ತು ಇಸ್ಲಾಮಿಕ್ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಹನೀಫ್ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಕೆಜಿ ವಿದ್ಯಾಥಿಗಳು ಪ್ರದರ್ಶಿಸಿದ ವರ್ಣ ರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು.
ಶಾಲೆಯ ಜನರಲ್ ಮ್ಯಾನೇಜರ್ ಶಮೀರ್ ಮತ್ತು ನಿರ್ದೇಶಕ ಅಯಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಪಾರ ಸಂಖ್ಯೆಯ ಪೋಷಕರು ಮತ್ತು ನಗರದ ಪ್ರಮುಖ ವಕ್ತಿಗಳು ಕಾರ್ಕ್ರಮದಲ್ಲಿ ಭಾಗವಹಿಸಿದ್ದರು.