ನೀರುಮಾರ್ಗ ಬಳಿ ಹೊಡೆದಾಟ ಆರೋಪ: ನಾಲ್ವರ ಸೆರೆ
ಮಂಗಳೂರು: ನಗರ ಹೊರವಲಯದ ನೀರುಮಾರ್ಗ ಬಳಿ ಯುವಕರ ತಂಡವೊಂದು ಹೊಡೆದಾಟ ನಡೆಸಿದ ಆರೋಪದ ಮೇರೆಗೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ.
ಮುಹಮ್ಮದ್ ಶರೀಫ್, ಅಬ್ದುಲ್ ರಹಿಮಾನ್ ಮತ್ತು ಚೇತನ್, ವಿಕ್ರಮ್ ಬಂಧಿತ ಆರೋಪಿಗಳು.
*ಆ.30ರಂದು ನೀರುಮಾರ್ಗ ಅಂಚೆ ಕಚೇರಿಯ ಬಳಿಯ ಸಾರ್ವಜನಿಕ ರಸ್ತೆ ಬದಿಯಲ್ಲಿ ಆರೋಪಿಗಳು ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ಕದಡಿರುವುದಾಗಿ ಪೊಲೀಸರು ತಿಳಿಸಿದ್ದರೆ.
Next Story