ಬಾಳ ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ
ಅರ್ಧಕ್ಕೆ ಮೊಟಕುಗೊಂಡ ಜಮಾಬಂಧಿ
ಸುರತ್ಕಲ್: 22-23ನೇ ಸಾಲಿನಲ್ಲಿ ಬಾಳ ಗ್ರಾಮ ಪಂಚಾಯತ್ ನಲ್ಲಿ ಬೃಹತ್ ಭ್ರಷ್ಟಾಚಾರ ನಡೆದಿದ್ದು, ಅದರ ಲೆಕ್ಕ ನೀಡದೆ, ಈ ಸಾಲಿನ ಜಮಾಬಂಧಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಸಭೆಯ ಬಾವಿಗೆ ಇಳಿದು ಪ್ರತಿಭಟಿಸಿ ಜಮಾಬಂಧಿಗೆ ತಡೆಯೊಟ್ಟಿದ ಘಟನೆ ಮಂಗಳವಾರ ಬಾಳ ಗ್ರಾಮ ಪಂಚಾಯತ್ ಸಭಾಂಗಭಣದಲ್ಲಿ ನಡೆಯಿತು.
ಮಂಗಳವಾರ 2024-25ನೇ ಸಾಲಿನ ಜಮಾಬಂಧಿ ಕಾರ್ಯಕ್ರಮ ಬಾಳ ಗ್ರಾಮ ಪಂಚಾಯತ್‌ನ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಸಭೆಯ ಆರಂಭದಲ್ಲಿ ಬಾಳ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ರೇಖಾ ಅವರು 2022-23ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಸಂಪೂರ್ಣ ಮಾಹಿತಿ ನೀಡುತ್ತಿದ್ದಂತೆ ಮಧ್ಯೆ ಮಾತನಾಡಿದ ಸಭೆಯ ನೋಡೆಲ್ ಅಧಿಕಾರಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶ ಪ್ರವೀಣ್ ಅವರು, 2022-23ನೇ ಸಾಲಿನ ಲೆಕ್ಕ ಪರಿಶೋಧನೆ ನನಗೆ ಗೊತ್ತಿಲ್ಲ. ಈ ಸಾಲಿನ ಜಮಾಬಂಧಿಗೆ ನನ್ನನ್ನು ನೋಡೆಲ್ ಅಧಿಕಾರಿಯಾಗಿ ಕಲುಹಿ ಸಲಾಗಿದ್ದು, ಈ ಸಾಲಿನ ಆಗುಹೋಗುಗಳ ಕುರಿತು ಸಭೆಯಲ್ಲಿ ಚರ್ಚಿಸುವಂತೆ ಮನವಿ ಮಾಡಿಕೊಂಡರು.
ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದಾಗ ಸಭೆ ಸಂಪೂರ್ಣ ಅಸ್ತವ್ಯಸ್ತಗೊಂಡು ಗೊಂದಲದ ಗೂಡಾಗಿ ಪರಿಣಮಿ ಸಿತು. ಆಗ ಮಾತನಾಡಿದ ರೇಖಾ ಅವರು 2022-23ನೇ ಸಾಲಿನ ಅವ್ಯವಹಾರಗಳ ಪಟ್ಟಿಯನ್ನು ಸಭೆಯ ಮುಂದಿಟ್ಟು, 2022-23ನೇ ಸಾಲಿನಲ್ಲಿ ಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 80ಸೆಂಟ್ಸ್ ಸರಕಾರಿ ಜಾಗವನ್ನು ಗುರುತಿಸಿ ಅದರಲ್ಲಿ 10 ಸೆಂಟ್ಸ್ ಜಾಗದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸುವುದಾಗಿ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಜಾಗದಲ್ಲಿ ಗಡಿರೇಖೆ ಮಾಡಿಕೊಂಡಿರಲಿಲ್ಲ. ಆದರೆ, ಅಂದಿನ ಜಮಾಬಂಧಿಯಲ್ಲಿ ಸಮು ದಾಯ ಆರೋಗ್ಯ ಕೇಂದ್ರದ 10ಸೆಂಟ್ಸ್ ನಿವೇಶನಕ್ಕೆ ಕಾಂಪೌಂಡ್ ನಿರ್ಮಾಣದ ಖರ್ಚು 6ಲಕ್ಷ ರೂ.ಗಳ ಎರಡು ಬಿಲ್ ಗಳನ್ನು ತೋರಿಸಲಾಗಿದೆ. ಸಮುದಾಯ ಋೋಗ್ಯ ಕೇಂದ್ರಕ್ಕೆ ಗಡಿಗುರುತು ಮಾಡಿಯೇ ಇಲ್ಲವಾದ ಮೇಲೆ ಯಾವ ಉದ್ದೇಶಕ್ಕಾಗಿ 6ಲಕ್ಷ ರೂ. ಖರ್ಚು ಮಾಡಲಾಗಿದೆ ಎಂಬ ಕುರಿತು ಪಂಚಾಯತ್ ಸ್ಪಷ್ಟನೆ ನೀಡುತ್ತಿಲ್ಲ. ಘನತ್ಯಾಜ್ಯ ಘಟಕ ನಿರ್ಮಾಣದಲ್ಲಿ ಅವ್ಯವಹಾರ ನಡೆಸಿದ್ದು, ಘಟಕ ನಿರ್ಮಾಣಕ್ಕೆ ಮೂರು ಹಂತದಲ್ಲಿ ಹಣ ಬಿಡುಗಡೆ ಮಾಡಿಕೊಂಡು ಅವ್ಯವಹಾರ ನಡೆಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶದ ಪ್ರಮುಖ ವ್ಯಕ್ತಿಗಳ ಸುಮಾರು 45 ಫೊಟೊಗಳ ಅಳವಡಿಕೆಗೆ 99 ಸಾವಿರ ರೂ. ವ್ಯಯಿಸಿರುವುದಾಗಿ ಲೆಕ್ಕ ಪತ್ರದಲ್ಲಿ ತೋರಿಸಲಾಗಿದೆ. ಆ ಫೊಟೊಗಳ ಪ್ರೇಮ್ ಗಳನ್ನು ಬೆಳ್ಳಿಯಿಂದ ಮಾಡಿಸಿದ್ದರೂ ಇಷ್ಟು ಖರ್ಚು ಆಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ಅವರೊಂದಿಗೆ ಧ್ವನಿಗೂಡಿಸಿದ ಗ್ರಾಮಸ್ಥರಾದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಎ. ಹಸನಬ್ಬ, ಅಬ್ದುಲ್ ಮಜೀದ್ ಮಂಗಳಪೇಟೆ, ಗ್ರಾಮ ಪಂಚಾಯತ್ ಸದಸ್ಯ ಸರ್ಫರಾಝ್ ಮೊದಲಾದವರು 2023-24ನೇ ಸಾಲಿನ ಜಮಾಬಂಧಿಯ ಸಂದರ್ಭದಲ್ಲೂ ಈ ಬಗ್ಗೆ ಸೂಕ್ತ ಉತ್ತರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಆಗಲೂ ಉತ್ತರ ನೀಡಿಲ್ಲ. ಆದರೆ, 2024-25ನೇ ಸಾಲಿನ ಜಮಾಬಂಧಿ ಮಾಡುವ ಮೊದಲು 2022-23ನೇ ಸಾಲಿನಲ್ಲಿ ನಡೆದಿ ರುವ ಅವ್ಯವಹಾರದ ಲೆಕ್ಕವನ್ನು ಸರಿಯದ ಕ್ರಮದಲ್ಲಿ ಸಭೆಯ ಮುಂದೆ ಮಂಡಿಸಿದ ಬಳಿಕವೇ ಈ ಸಾಳಿನ ಜಮಾಬಂಧಿ ನಡೆಸಲು ಅವಕಾಶ ನೀಡುವುದಾಗಿ ಪ್ರತಿಭಟನೆ ನಡೆಸಿದರು.
ಸಮುದಾಯ ಆರೋಗ್ಯ ಕೇಂದ್ರದ ಆವರಣ ಗೋಡೆಯ ನೆಪದಲ್ಲಿ ಹಣ ಬಿಡುಗಡೆ ಮಾಡಿಕೊಂಡು ಮಳೆಗಾಲದಲ್ಲಿ ಬಿದಿದ್ದ ಖಾಸಗಿಯವರ ಆವರಣಗೋಡೆಯನ್ನು ಕಟ್ಟಿಸಲಾಗಿದೆ. ಬೆಂಕಿನಾಥೇಶ್ವರ ದೇವಸ್ಥಾನದ ಬಳಿ ಶೌಚಾಲಯ ನಿರ್ಮಾಣಕ್ಕೆ ಎಂದು 5ಲಕ್ಷ ರೂ. ಬಿಡುಗಡೆ ಮಾಡಿಸಿಕೊಂಡಿರುವ ಬಿಜೆಪಿ ಆಡಳಿತ, ಅವರಿಗೆ ಬೇಕಾದವರಿಗೆ ಸೌಕರ್ಯವಾಗುವಂತೆ ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. ಬಾಳ ಗ್ರಾಮದಲ್ಲಿ ಒಣಕಸ ವಿಲೇವಾರಿಗೆಂದು ತಿಂಗಳಿಗೆ 31ಸಾವಿರ ರೂ. ಬಾಡಿಗೆ ನೀಡಿ ವಾಹನ ತರಿಸಿಕೊಂಡಿದ್ದು, ಅದರಲ್ಲಿ ಅರ್ಧದಷ್ಟೂ ಒಣಕಸ ಶೇಖರಣೆಯಾಗುತ್ತಿಲ್ಲ. ಸುಖಾಸುಮ್ಮನೆ ಅಷ್ಟೊಂದು ದುಬಾರಿ ಬಾಗಿಗೆ ನೀಡಲಾಗುತ್ತಿದ್ದು, ಅದರ ಬದಲಾಗಿ ಸಣ್ಣವಾಹನವನ್ನು ಮಾಡಿದರೆ ಉತ್ತಮ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ಈ ಎಲ್ಲಾ ವಿಚಾರಳಿಗೆ ಸೂಕ್ತ ಉತ್ತರ ನೀಡಿದ ಬಳಿಕವೇ ಈ ಸಾಲಿನ ಜಮಾಬಂಧಿ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿ ದರು. ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ನೋಡೆಲ್ ಅಧಿಕಾರಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶ ಪ್ರವೀಣ್ ಅವರು, ಈ ಸಭೆಯಲ್ಲಿ 2022-23ನೇ ಸಾಲಿನ ಲೆಕ್ಕ ಪತ್ರದ ಕುರಿತಾಗಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿ ಸಿದ್ದು, ಸಭೆ ನಡೆಸಲು ಅವಕಾಶ ನೀಡಿಲ್ಲ ಎಂದು ದಾಖಲೆ ಪುಸ್ತಕದಲ್ಲಿ ಬರೆದು ಅದನ್ನು ತಾಲೂಕು ಪಂಚಾಯತ್ ಅಧಿಕಾರಿ ಗಳ ಗಮಕ್ಕೆ ತರುವುದಾಗಿ ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದರು.
"ಬಾಳ ಗ್ರಾಮ ಪಂಚಾಯತ್ ನಲ್ಲಿ ಆಡಳಿತ ಸಮಿತಿ ಸಾಮಾನ್ಯ ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿ ಕ್ರಮಕೈಗೊಳ್ಳುವ ಬದಲು ಸರ್ವಾಧಿಕಾರಿಗಳಂತೆ ತಮಗೆ ಬೇಕಾದ ಹಾಗೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅವ್ಯವಹಾರ ನಡೆಸಿರು ವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಾಗಾಗಿ ಈ ಸಂಬಂಧ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಇಂದು ನಡೆದ ಜಮಾಬಂಧಿಯಲ್ಲೂ ಅವ್ಯವಹಾರಕ್ಕೆ ಸಂಬಂಧಿಸಿ ಯಾವುದೇ ಸೂಕ್ತ ಉತ್ತರ ನೀಡದಿರುವ ಕುರಿತು ಮತ್ತೊಮ್ಮೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು".
- ರೇಖಾ, ಬಾಳ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ.
"2022-23ನೇ ಸಾಲಿನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಇಂದು ನಡೆದ ಜಮಾಬಂಧಿಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಒಂದು ಭಾಗದ ಹೆಸರಿನಲ್ಲಿ ಅವರಿಗೆ ಬೇಕಾದಹಾಗೆ ಇನ್ನೊಂದು ಕಡೆ ಕಾಮಗಾರಿ ನಡೆಸಿ ಹಣ ದುರುಪಯೋಗ ಪಡಿಸಿಕೊಂಡಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಹಾಗಾಗಿ ಗ್ರಾಮಸ್ಥರು ಸಭೆಯಲ್ಲಿ ಪ್ರತಿಭಟನೆ ಮಾಡಿ ಜಮಾಬಂಧಿಗೆ ಅವಕಾಶ ನೀಡದ ಕಾರಣ ಇಂದು ಜಮಾಬಂಧಿ ನಡೆಸಲು ಸಾಧ್ಯವಾಗಿಲ್ಲ".
- ಸರ್ಫರಾಝ್ ಸವಾಝ್, ಗ್ರಾಮ ಪಂಚಾಯತ್ ಸದಸ್ಯ
"ಬಾಳ ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರಗಳು ನಡೆದಿಲ್ಲ. 2022-23ರ ಕಾಮಗಾರಿಗಳ ಬಿಲ್‌ಗಳ ಕುರಿತ ಗ್ರಾಮ ಸ್ಥರ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಕೊಟ್ಟಿದ್ದಾರೆ. ರಾಜಕೀಯ ಪ್ರೇರಿತರಾಗಿ ಈ ಆರೋಪಗಳನ್ನು ಮಾಡಲಾಗುತ್ತಿದೆ. ಅವ್ಯವಹಾರ ನಡೆದಿರುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು".
- ಶಂಕರ್ ಜೊಗಿ, ಅಧ್ಯಕ್ಷರು ಬಾಳ ಗ್ರಾಮ ಪಂಚಾಯತ್