ಜಮೀನು ನೋಂದಣಿ ಬಳಿಕ ಖಾತೆಯಿಂದ ಹಣ ವರ್ಗಾವಣೆ ಆರೋಪ: ಮಂಗಳೂರು ಸೆನ್ ಠಾಣೆಗೆ ದೂರು
ಮಂಗಳೂರು,ಅ.25: ನಗರದ ಉಪನೋಂದಣಾಧಿಕಾರಿಯ ಕಚೇರಿಯಲ್ಲಿ ಜಮೀನು ನೋಂದಣಿಯ ಬಳಿಕ ತನ್ನ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವುದಾಗಿ ಆರೋಪಿಸಿ ದೂರು ನೀಡಿದ ಮೇರೆಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.13ರಂದು ತಾನು ಮನೆಯಲ್ಲಿರುವಾಗ ತನ್ನ ಮೊಬೈಲ್‌ಗೆ ಬಂದ ಎಸ್ಸೆಮ್ಮೆಸ್ ಸಂದೇಶವನ್ನು ಪರಿಶೀಲಿಸಿದಾಗ ಕೆನರಾ ಬ್ಯಾಂಕ್ ಹಂಪನಕಟ್ಟ ಶಾಖೆಯಿಂದ 5,000 ರೂ. ಕಡಿತವಾಗಿರುವುದು ಕಂಡು ಬಂತು. ಸೆ.14ರಂದು ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಸೆ.12ರಂದು 10 ಸಾವಿರ ಮತ್ತು ಸೆ.13ರಂದು 5 ಸಾವಿರ ಹೀಗೆ 15,000 ರೂ. ಅನಧಿಕೃತವಾಗಿ ವರ್ಗಾವಣೆಯಾಗಿರುವುದು ಧೃಢಪಟ್ಟಿದೆ. ಈ ಬಗ್ಗೆ ತನಗೆ ಯಾವುದೇ ಓಟಿಪಿ ಸಂದೇಶ ಬಂದಿಲ್ಲ. ಆ.27ರಂದು ತಾನು ಮಂಗಳೂರಿನ ಉಪ ನೋಂದಣಾಧಿಕಾರಿಯ ಕಚೇರಿಯಲ್ಲಿ ಜಮೀನು ನೋಂದಣಿ ಮಾಡಲು ಹೆಬ್ಬೆರಳಿನ ಗುರುತು ನೀಡಿದ್ದೆ. ಅದನ್ನು ಬಳಸಿ ಆಧಾರ್ ಲಿಂಕ್ ಉಪಯೋಗಿಸಿ ಯಾರೋ ಅಪರಿಚಿತರು ತನ್ನ ಖಾತೆಯಿಂದ ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Next Story