ಜುಗಾರಿ ಆಟವಾಡುತ್ತಿದ್ದ ಆರೋಪ: 7 ಮಂದಿ ಸೆರೆ
ಮಂಗಳೂರು: ನಗರದ ಬಂದರ್ ಧಕ್ಕೆಯ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟವಾಡುತ್ತಿದ್ದ ಪ್ರಕರಣದಲ್ಲಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನವಾಝ್, ಅಬೂಬಕ್ಕರ್ ಸಿದ್ದೀಕ್, ಅಬ್ದುಲ್ ರಝಾಕ್, ರಾಝಿಕ್ ಮುಹಮ್ಮದ್, ಇಬ್ರಾಹೀಂ ಫೈಸಲ್, ಅಬ್ದುಲ್ ರಹಿಮಾನ್, ರಿಜ್ವಾನ್ ಅಹ್ಮದ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಜು.16ರಂದು ಆರೋಪಿಗಳು ಜುಗಾರಿ ಆಟವಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಬಂದರ್ ಠಾಣೆಯ ಎಸ್ಸೈ ವಿನಾಯಕ ತೋರಗಲ್ ದಾಳಿ ನಡೆಸಿ ಬಂಧಿಸಿ 3580ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story