ಗಾಂಜಾ ಸೇವನೆ ಆರೋಪ: ಮೂವರ ಬಂಧನ
ಮಂಗಳೂರು : ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಮಂಗಳೂರು ಪೊಲೀಸರು ರವಿವಾರ ನಗರದ ದಂಬೆಲ್ ಮತ್ತು ಉತ್ತರ ದಕ್ಕೆಯಲ್ಲಿ ಮೂವರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಅಶೋಕನಗರ ಕೋಡಿಕಲ್ಕಟ್ಟೆಯ ಜಾನ್ಸನ್ (30), ವಿಲ್ಸನ್(28) ಮತ್ತು ತಮಿಳುನಾಡಿನ ಕಾರ್ತಿಕ್ (33) ಬಂಧಿತರು. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story