ಬಜ್ಪೆ: ಅಸಮರ್ಪಕ ಕಾಮಗಾರಿ ಖಂಡಿಸಿ ಠಾಣಾಧಿಕಾರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ
ಬಜ್ಪೆ, ಅ.11: ಬಜ್ಪೆ ಪೇಟೆಯ ರಸ್ತೆ ಅಗಲೀಕರಣದ ಸಮಯದಲ್ಲಿ ಕೈಗೊಂಡಿರುವ ಅಸಮರ್ಪಕ ಕಾಮಗಾರಿಗಳನ್ನು ಖಂಡಿಸಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಬಜ್ಪೆ ಠಾಣಾಧಿಕಾರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ವಾಹನಗಳು ಸರಾಗವಾಗಿ ಓಡಾಡಲು ಸಮರ್ಪಕವಾಗಿ ಕಾಮಗಾರಿ ಕೈಗೊಳ್ಳದೇ, ಪ್ರಭಾವಿಗಳ ಒತ್ತಡಕ್ಕೆ ಮಣಿದು ನೇರ ವಾಗಿ ಮಾಡಬೇಕಾಗಿದ್ದ ರಸ್ತೆಯನ್ನು ತಿರುವು ಮುರುವುಗಳಾಗಿ ನಿರ್ಮಾಣಮಾಡಿದ್ದು, ಇದು ಅಪಘಾತಕ್ಕೆ ಕಾರಣವಾ ಗುತ್ತಿದೆ. ತಕ್ಷಣ ಈ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಮನವರಿಕೆ ಮಾಡಿಸಿ ಸೂಕ್ತ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿ ಬಜ್ಪೆ ಪೊಲೀಸ್ ಠಾಣಾಧಿಕಾರಿ ಮತ್ತು ಬಜ್ಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ, ಸಹ ಸಂಚಾಲಕ ಇಂಜಿನಿಯರ್ ಇಸ್ಮಾಯಿಲ್,ಬಲ ಬಜ್ಪೆ ಗ್ರಾ.ಪಂ. ಮಾಜಿ ಸದಸ್ಯರಾದ ಮುಹಮ್ಮದ್ ಶರೀಫ್, ಜೇಕಬ್ ಪಿರೇರಾ, ಶೇಖರ ಗೌಡ, ನಝೀರ್ ಕಿನ್ನಿಪದವು, ಟೀಮ್ ಕರಾವಳಿ ಅಧ್ಯಕ್ಷ ನಿಸಾರ್ ಕರಾವಳಿ, ರಹೀಮ್ ಕಳವಾರು, ಮನ್ಸೂರು, ದಲಿತ ಸಂಘಟನೆಯ ಮುಖಂಡ ಲಕ್ಷ್ಮೀಶ್, ಎಸ್ಸೆಸ್ಸೆಫ್ ಮುಖಂಡ ಸಲೀಲ್ ಡಿಲಕ್ಸ್, ಹಫೀಝ್ ಕೊಳಂಬೆ, ಊರಿನ ಹಿರಿಯರಾದ ಮೊನಾಕ, ಅನ್ವರ್ ಸಾಬ್, ಸಲೀಮ್ ಹಾಜಿ ಮೊದಲಾದವರು ಇದ್ದರು.
ಇದೇ ಸಂದರ್ಭ ಬಜ್ಪೆ ಪೊಲೀಸ್ ಠಾಣೆಯ ಅಧಿಕಾರ ವಹಿಸಿಕೊಂಡ ನೂತನ ವೃತ್ತ ನಿರೀಕ್ಷಕರನ್ನು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.