ಬಂಟ್ವಾಳ: ಸಿಪಿಎಂ ಮುಖಂಡ ವಾಸು ಗಟ್ಟಿ ನಿಧನ
ಬಂಟ್ವಾಳ: ತಾಲೂಕಿನ ಕಮ್ಯೂನಿಸ್ಟ್ ಪಕ್ಷದ ಹಿರಿಯ ಮುಂದಾಳು, ಕಾರ್ಮಿಕ ಮುಖಂಡ, ಬಿ.ವಾಸು ಗಟ್ಟಿ(80) ವಯೋಸಹಜ ಅನಾರೋಗ್ಯದಿಂದ ಗುರುವಾರ ನಿಧನರಾಗಿದ್ದಾರೆ.
ಬಿ.ಸಿ.ರೋಡ್ ಸಮೀಪದ ಮೊಡಂಕಾಪು ನಿವಾಸಿಯಾಗಿದ್ದ ಅವರು ಹಲವು ವರ್ಷಗಳ ಕಾಲ ಸಿಪಿಎಂ ಪಕ್ಷದ ಬಂಟ್ವಾಳ ತಾಲೂಕು ಕಾರ್ಯದರ್ಶಿಯಾಗಿದ್ದರು. ಬೀಡಿ ಕಾರ್ಮಿಕರು ಹಾಗೂ ರೈತ ಸಂಘಟನೆಯ ಮುಖಂಡರಾಗಿ ಹಲವಾರು ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story