ಬಂಟ್ವಾಳ : ಮನೆಯ ಬಾಗಿಲಿಗೆ ಪೆಟ್ರೋಲ್ ಸರಿದು ಬೆಂಕಿ ಹಚ್ಚಿದ ಪ್ರಕರಣ; ಆರೋಪಿಗಳ ಬಂಧನ
ಬಂಟ್ವಾಳ : ಗುಂಪೊಂದು ಮನೆಯ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೀಟರ್ ಬಡ್ಡಿ ವಸೂಲಿಗಾರ ಸುಮಿತ್ ಆಳ್ವ ಅಲಿಯಾಸ್ ಸುಮ್ಮಿ, ಜುನೈದ್, ಸೀಯಾನ್ ಮತ್ತು ತೌಫೀಕ್ ಎಂಬವರನ್ನು ಬಂಧಿಸಿರುವುದಾಗಿ ಬಂಟ್ವಾಳ ನಗರ ಠಾಣೆ ಪೊಲೀಸರು ತಿಳಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ 15 ದಿನಗಳ ನ್ಯಾಯಂಗ ಬಂಧನ ವಿಧಿಸಿದೆ.
Next Story