ಬಂಟ್ವಾಳ : ಬಾಲಕಿಗೆ ಕಿರುಕುಳ; ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು
ಬಂಟ್ವಾಳ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಯುವಕನೋರ್ವನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನರಿಕೊಂಬು ನಿವಾಸಿ ರಿಕ್ಷಾ ಚಾಲಕ ಅಬೂಬಕ್ಕರ್ ಸಿದ್ದೀಕ್ ಎಂಬಾತ ಕಿರುಕುಳ ನೀಡಿರುವುದಾಗ ಬಾಲಕಿಯ ತಂದೆ ದೂರು ನೀಡಿದ್ದಾರೆ.
ಪಾಣೆಮಂಗಳೂರು ಸಮೀಪದ ಕಾಲೇಜೊಂದರ ಬಳಿ ರಸ್ತೆ ಬದಿಯಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಯುವಕ ಬಾಲಕಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಬಾಲಕಿ ಯುವಕನ ಕಿರುಕುಳದಿಂದ ಹೆದರಿ ಮೂರ್ಚೆ ಹೋಗಿ ರಸ್ತೆ ಬದಿ ಬಿದ್ದಿದ್ದು, ಈಕೆಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾದಕ ಚಾಕಲೇಟ್ ತಿಂದು ಬಾಲಕಿ ಅಸ್ವಸ್ಥ, ಗಾಳಿ ಸುದ್ದಿ
ʼರಿಕ್ಷಾ ಚಾಕನೋರ್ವ ಬಾಲಕಿಗೆ ಮಾದಕ ಚಾಕಲೇಟ್ ನೀಡಿದ್ದು, ಚಾಕಲೇಟ್ ತಿಂದ ಬಾಲಕಿ ಮೂರ್ಚೆ ಹೋಗಿ ಬಿದ್ದಿದ್ದಾಳೆ, ಅವಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆʼ ಹೀಗೊಂದು ಗಾಳಿ ಸುದ್ದಿ ಹರಿದಾಡಿದ್ದು ಆಸ್ಪತ್ರೆಯಲ್ಲಿ ಜನ ಸೇರಿದ್ದರು.
ಸುದ್ದಿ ಹರಿದಾಡುತ್ತಿರುವ ಮಾಹಿತಿ ಪಡೆದ ತಕ್ಷಣ ಕಾರ್ಯಪ್ರವೃತ್ತರಾದ ಬಂಟ್ವಾಳ ನಗರ ಪೊಲೀಸರು ಚಾಕಲೇಟನ್ನು ವಶಕ್ಕೆ ಪಡೆದು ಪರೀಕ್ಷೆ ನಡೆಸಿದ್ದು, ಅದು ಮಾದಕ ಚಾಕಲೇಟ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಯಾವುದೇ ಸಂದೇಹ ಬೇಡ, ಆರೋಪಿಯನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.