ಬಂಟ್ವಾಳ: ಕಾನೂನು ಮಾಹಿತಿ ಕಾರ್ಯಾಗಾರ
ಬಂಟ್ವಾಳ: ಮುಸ್ಲಿಂ ಸಮಾಜ ಬಂಟ್ವಾಳ ಮತ್ತು ಮುಸ್ಲಿಂ ಜಸ್ಟೀಸ್ ಫಾರಂ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಕಾನೂನು ಮಾಹಿತಿ ಕಾರ್ಯಾಗಾರವು ಬಿ.ಸಿ. ರೋಡಿನ ರೋಟರಿ ಕ್ಲಬ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲರುಗಳಾದ ಮುಝಫರ್ ಅಹ್ಮದ್ ಬೆಂಗಳೂರು ಹಾಗೂ ವಕೀಲ ಇಮ್ತಿಯಾಜ್ ಬಿ ಮಂಗಳೂರು ಸ್ವಾತಂತ್ರ್ಯಾನಂತರ ಭಾರತದಲ್ಲಿ ಚಾಲ್ತಿಯಲ್ಲಿದ್ದಂತಹ ಕಾನೂನುಗಳ ಬಗ್ಗೆ ಮತ್ತು ಇತ್ತೀಚಿಗೆ ಕಾನೂನಿನ ನಿಯಮಾವಳಿಗಳಲ್ಲಿ ಆದ ಬದಲಾವಣೆಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು. ಹಾಗೂ ಸಭಿಕರ ಸಂಶಯ ಹಾಗೂ ಪ್ರಶ್ನೆಗಳಿಗೆ ಉತ್ತರಿಸಿದರು.
ಬಂಟ್ವಾಳ ಮುಸ್ಲಿಂ ಸಮಾಜದ ಅಧ್ಯಕ್ಷ ಕೆ.ಎಚ್. ಅಬೂಬಕರ್ ಅದ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಮುಸ್ಲಿಂ ಸಮಾಜದ ಹಿರಿಯ ಸದಸ್ಯರಾದ ಪಿ.ಎ. ರಹೀಂ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಸ್ಲಿಂ ಜಸ್ಟೀಸ್ ಫೋರಂ ಇದರ ವಕ್ತಾರ ಹಾಗೂ ಬಂಟ್ವಾಳ ಮುಸ್ಲಿಂ ಸಮಾಜದ ಕಾರ್ಯದರ್ಶಿ ಹನೀಫ್ ಖಾನ್ ಕೊಡಾಜೆ ಮಾತನಾಡಿದರು.
ಮುಸ್ಲಿಂ ಜಸ್ಟೀಸ್ ಫಾರಂ ಪ್ರಧಾನ ಕಾರ್ಯದರ್ಶಿ ವಹಾಬ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ಧರು.
ಮುಸ್ಲಿಂ ಜಸ್ಟೀಸ್ ಫೋರಂ ಅಧ್ಯಕ್ಷ ಇರ್ಷಾದ್ ಯು.ಟಿ ಸ್ವಾಗತಿಸಿ, ಸಲಾಂ ಉಚ್ಚಿಲ ವಂದಿಸಿದರು. ಇಕ್ಬಾಲ್ ಐ.ಎಂ.ಆರ್ ಕಾರ್ಯಕ್ರಮ ನಿರೂಪಿಸಿದರು.