ಬಂಟ್ವಾಳ: ಖಾಸಗಿ ಬಸ್ ಢಿಕ್ಕಿ; ಬೈಕ್ ಸವಾರ ಮೃತ್ಯು
ಬಂಟ್ವಾಳ: ಖಾಸಗಿ ಬಸ್ ಬೈಕ್ ಗೆ ಢಿಕ್ಕಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಬೈಕ್ ಸವಾರ ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ಕಲ್ಲಡ್ಕ ಸಮೀಪದ ಮುರಬೈಲು ನಿವಾಸಿ ಮೆಕಾನಿಕ್ ಲತೀಶ್ ಮೃತಪಟ್ಟವರು.
ಈತ ಪಣೋಲಿಬೈಲು ದೇವಸ್ಥಾನಕ್ಕೆ ಹೋಗಿ ವಾಪಸು ಮನೆಗೆ ಬರುವ ವೇಳೆ ವಿಟ್ಲದಿಂದ ಮಂಗಳೂರು ಕಡೆಗೆ ಹೋಗುವ ಸೆಲಿನಾ ಖಾಸಗಿ ಬಸ್ ಕಲ್ಲಡ್ಕದಲ್ಲಿ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಲತೀಶ್ ನನ್ನು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಬಂಟ್ವಾಳ ಸಂಚಾರಿ ಠಾಣಾಧಿಕಾರಿ ಸುತೇಶ್ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story