ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಉತ್ತಮ: ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ
ನ್ಯಾ.ಸಂತೋಷ್ ಹೆಗ್ಡೆ
ಮಂಗಳೂರು: ಇಂಥಹ ಗಂಭೀರವಾದ ಆರೋಪಗಳಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಕೊಡದೇ ಇದ್ದರೆ ಕಾನೂನಿನಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸಾರ್ವಜನಿಕರ ದೃಷ್ಟಿಯಲ್ಲಿ ನನಗೆ ಅನಿಸಿದಾಗೆ ರಾಜೀನಾಮೆ ಕೊಡಬೇಕು ಎಂದು ಮಂಗಳೂರಿನಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಹಾಗೂ ವಿಶೇಷ ನ್ಯಾಯಾಲಯದ ತೀರ್ಪು ಕುರಿತು ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಹಿಂದೆ ರೈಲ್ವೇ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅಪಘಾತ ಮಾಡಿದಾಗ ರಾಜೀನಾಮೆ ಕೊಟ್ಟಿದ್ದರು. ಕೊಡಬೇಕೋ ಕೊಡಬೇಡವೋ ಅನ್ನೋದು ಅವರಿಗೆ ಮತ್ತು ಅಧಿಕಾರಿಗಳಿಗೆ ಬಿಟ್ಟಿದ್ದು. ಈವಾಗ ಅನುಮತಿ ಕೊಟ್ಟಿದ್ದು ಮೂಡಾದ ವಿಚಾರ ದಲ್ಲಿ ಮಾತ್ರ. ಹೈಕೋರ್ಟ್ ಕೂಡ ಮೇಲ್ನೋಟಕ್ಕೆ ಇದರಲ್ಲಿ ಪುರಾವೆ ಇದೆ ಅಂತ ಹೇಳಿದೆ. ಆ ಹಿನ್ನೆಲೆಯಲ್ಲಿ ನನಗೆ ಅನಿಸ್ತಾ ಇದೆ ರಾಜೀನಾಮೆ ಕೊಡಬೇಕು ಅಂತ, ಮತ್ತೆ ಅವರಿಗೆ ಬಿಟ್ಟಿದ್ದು. ಯಾವ ತನಿಖಾ ಸಮಿತಿ ಉತ್ತಮ ಅಂತ ಹೇಳಲು ಹೋಗಲ್ಲ, ಅದು ಸರ್ಕಾರಕ್ಕೆ ಬಿಟ್ಟ ವಿಚಾರ, ಯಾವುದೇ ತನಿಖಾ ಸಮಿತಿ ವಿಚಾರಣೆ ಮಾಡಬಹುದು. ಅವರು ಆರೋಪಿ ಅಲ್ಲ ಅಂತ ತೀರ್ಪು ಬಂದರೆ ಮತ್ತೆ ಹುದ್ದೆಗೆ ವಾಪಾಸ್ ಬರಬಹುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.