ಬಿಐಟಿಯಿಂದ NBA ಮಾನ್ಯತೆ ಹಾಗೂ ಫಲಶ್ರುತಿ ಆಧಾರಿತ ಶಿಕ್ಷಣದ ಕುರಿತು ಸಂವಾದ ಕಾರ್ಯಕ್ರಮ

ಮಂಗಳೂರು: ಜನವರಿ 17ರಂದು ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು “ಸಾಂಸ್ಥಿಕ ಪ್ರಗತಿಗೆ ಚಾಲನೆ: NBA ಮಾನ್ಯತೆ ಹಾಗೂ ಫಲಶ್ರುತಿ ಆಧಾರಿತ ಶಿಕ್ಷಣ”ದ ಕುರಿತು ಒಳನೋಟವುಳ್ಳ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮವು ಬೆಳಗ್ಗೆ 9.30ಕ್ಕೆ ಪ್ರಾರಂಭಗೊಂಡಿತು. ಈ ಕಾರ್ಯಕ್ರಮದಲ್ಲಿ ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಬೋಧಕ ವರ್ಗ ಹಾಗೂ ಸಿಬ್ಬಂದಿ ವರ್ಗ ಉತ್ಸಾಹ ದಿಂದ ಪಾಲ್ಗೊಂಡಿದ್ದವು.
NBA ಸಮನ್ವಯಕಾರರಾದ ಡಾ.ಆಮೀರ್ ಬಾಶಾ ಅವರು ಸ್ವಾಗತ ಭಾಷಣ ಮಾಡಿ, ಶಿಕ್ಷಣದಲ್ಲಿನ ಗುಣಮಟ್ಟದ ಮಾನ ದಂಡದ ಪ್ರಾಮುಖ್ಯತೆ ಕುರಿತು ಒತ್ತಿ ಹೇಳಿದರು. ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರು ಜಾಗತಿಕ ಮಾನ್ಯತೆ ಪಡೆಯಲು ಸಂಸ್ಥೆಯ ಶೈಕ್ಷಣಿಕ ಮಾನ್ಯತೆ ಹಾಗೂ ಮೂಲಸೌಕರ್ಯ ಪ್ರಮಾಣೀಕರಣವನ್ನು ಸುಧಾರಿಸಲು ಎನ್ಬಿಎ ಮಾನ್ಯತೆಯ ಮಹತ್ವದ ಕುರಿತು ಬೆಳಕು ಚೆಲ್ಲಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಡಾ. ಸುನೀತಾ ಹಾಗೂ ಪ್ರೊ. ವಿಜಯಲಕ್ಷ್ಮಿ ಭಾಗವಹಿಸಿದ್ದರು. ಅವರು ಫಲಶ್ರುತಿ ಆಧಾರಿತ ಶಿಕ್ಷಣದ ತತ್ವಗಳು ಹಾಗೂ ಒಟ್ಟಾರೆ ಶೈಕ್ಷಣಿಕ ಅನುಭವವನ್ನು ಸುಧಾರಿಸುವಲ್ಲಿ ಅವುಗಳ ಮಹತ್ವದ ಪಾತ್ರದ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಅವರು ಅವಧಿಯು ಎನ್ಬಿಎ ಮಾನ್ಯತೆಯನ್ನು ಯಶಸ್ವಿಯಾಗಿ ಪಡೆಯಲು ಬೇಕಾದ ಪ್ರಾಯೋಗಿಕ ಒಳನೋಟಗಳು ಹಾಗೂ ಕಾರ್ಯತಂತ್ರಗಳನ್ನು ಒಳಗೊಂಡಿತ್ತು. ಇದರಿಂದ ಕಾರ್ಯಕ್ರಮವು ಅತ್ಯಂತ ಸಂವಾದಮಯ ಹಾಗೂ ಮಾಹಿತಿ ಯುಕ್ತವಾಗಿತ್ತು.
ಇಡೀ ದಿನ ನಡೆದ ಕಾರ್ಯಕ್ರಮವು ಸಂಜೆ 4.30 ಗಂಟೆಗೆ ಇಸಿಇ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿಯವರ ವಂದನಾರ್ಪಣೆಯೊಂದಿಗೆ ಸಮಾರೋಪಗೊಂಡಿತು. ಸಂವಾದ ಅವಧಿಯನ್ನು ಭಾರಿ ಯಶಸ್ವಿಯಾಗಿಸಿದ್ದಕ್ಕೆ ಅವರು ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಧನ್ಯವಾದ ಸಲ್ಲಿಸಿದರು.