ಮಂಗಳೂರು ಎಂ.ಐ.ಒ ದಲ್ಲಿ ರಕ್ತದಾನ ಶಿಬಿರ
ಮಂಗಳೂರು: ಎಂ ಐ.ಒ ಸ್ಪೆಶಾಲಿಟಿ ಕ್ಯಾನ್ಸರ್ ಆಸ್ಪತ್ರೆ ಪಂಪ್ ವೆಲ್ ಮಂಗಳೂರು ಇದರ ಮುಂದಾಳತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಸೆಂಟರ್ ಮಂಗಳೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.
ರಕ್ತದಾನದ ಸಲುವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೆಡ್ ಕ್ರಾಸ್ ಸಲಹಾಗಾರರು ಹಾಗೂ ದ.ಕ ಮಾಜಿ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಪ್ರಭಾಕರ್ ಶರ್ಮ, ರಕ್ತ ಕ್ಕೆ ಪರ್ಯಾಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಜಾತಿ ಮತದ ಹಂಗಿಲ್ಲ.ಆದುದರಿಂದ ಮಾನವ ಸಂಬಂದ ಗಳನ್ನು ಬೆಸೆಯುವ ರಕ್ತದಾನ ಮಾಡಲು ಪ್ರತಿಯೊಬ್ಬರೂ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಎಂ.ಐ.ಒ ಸ್ಪೆಶಾಲಿಟಿ ಕ್ಯಾನ್ಸರ್ ಆಸ್ಪತ್ರೆ ಯಶಸ್ವಿಯಾಗಿ ಈ ಶಿಬಿರ ಆಯೋಜಿಸಿರುವುದು ಅಲ್ಲದೆ ಎಂ. ಐ .ಒ ದ ಹೆಚ್ಚಿನ ಸಿಬ್ಬಂದಿಗಳು ರಕ್ತದಾನ ಮಾಡಿರುವುದು ಅತ್ಯಂತ ಸ್ತುತ್ಯಾರ್ಹ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಐ.ಒ ನಿರ್ದೇಶಕರು ಹಾಗೂ ಕ್ಯಾನ್ಸರ್ ತಜ್ಞರಾದ ಡಾ.ಡಿ.ಸುರೇಶ್ ರಾವ್ ಅವರು ಜೀವ ಉಳಿಸಲು ಇರುವ ಏಕೈಕ ಅವಕಾಶವೆಂದರೆ ಅದು ರಕ್ತದಾನ. ರಕ್ತ ನೀಡುವ ಬಗ್ಗೆ ಹಿಂಜರಿಕೆ ಸಲ್ಲದು ಎಂದು ನುಡಿದರು.
ಶಿಬಿರದಲ್ಲಿ 100 ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಎಂ. ಐ. ಒ ಸಿಬ್ಬಂಡಿಗಳು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ಕಾರ್ಯ ಕ್ರಮದಲ್ಲಿ ರೆಡ್ ಕ್ರಾಸ್ ಜಿಲ್ಲಾ ಸಂಯೋಜಕರಾದ ಶ್ರೀ ಪ್ರವೀಣ್ ಕುಮಾರ್ ಶಿಬಿರ ನೆರವೇರುವಲ್ಲಿ ಅಗತ್ಯ ಸಹಕಾರ ನೀಡಿದರು. ಎಂ.ಐ.ಒ ಆಸ್ಪತ್ರೆಯ ಕ್ಯಾನ್ಸರ್ ತಜ್ಞರಾದ ಡಾ.ಹೇಮಂತ್ ಕುಮಾರ್,ಹಾಗೂ ಡಾ.ವೆಂಕಟರಮನ್ ಕಿಣಿ ಉಪಸ್ಥಿತರಿದ್ದು,ಶಿಬಿರ ಆಯೋಜನೆಯಲ್ಲಿ ಮಾರ್ಗದಶನ ನೀಡಿದ್ದರು.ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು,ಶೀಮತಿ ವಿಜಯ ವಂದನಾರ್ಪನೆಗೈದರು.