ಬೊಂಡ ಫ್ಯಾಕ್ಟರಿಯ ಬೊಂಡಾ ನೀರು ಕುಡಿದು ಅಸ್ವಸ್ಥಗೊಂಡ ವದಂತಿ
ವಾಟ್ಸಾಪ್ ಸಂದೇಶದ ಸತ್ಯಾಸತ್ಯತೆ ತಿಳಿಯಲು ಡಿಎಚ್ಒ ಗೆ ಜಿಲ್ಲಾಧಿಕಾರಿ ನಿರ್ದೇಶನ
ಮಂಗಳೂರು : ನಗರದ ಬೊಂಡಾ ಫ್ಯಾಕ್ಟರಿಯಿಂದ ತಂದ ಬೊಂಡಾ ನೀರು ಕುಡಿದು ವಳಚ್ಚಿಲ್ ನ ಸುಮಾರು 20 ಕ್ಕೂ ಹೆಚ್ಚಿನ ಜನ ಅಸ್ವಸ್ಥಗೊಂಡಿದ್ದಾರೆ ಎಂಬುದಾಗಿ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಸಂದೇಶದ ಸತ್ಯಾ ಸತ್ಯತೆ ತಿಳಿಯುವಂತೆ ದಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜಿಲ್ಲಾ ಆರೋಗ್ಯಾಧಿಕಾರಿ ಗೆ ನಿರ್ದೇಶನ ನೀಡಿದ್ದಾರೆ.
ನನಗೂ ಸ್ವಲ್ಪ ಸಮಯ ಮುಂಚಿತವಾಗಿ ಈ ಕುರಿತಾದ ವಾಟ್ಸಾಪ್ ಸಂದೇಶ ಬಂದಿದ್ದು ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ತಂಡವನ್ನು ಪರಿಶೀಲನೆ ಗಾಗಿ ಸ್ಥಳಕ್ಕೆ ತೆರಳಿದೆ ಎಂದು ಜಿಲ್ಲಾಧಿಕಾರಿ ಮು ಮುಗಿಲನ್ ಅವರು ವಾರ್ತಾಭಾರತಿ ಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ನಿರ್ದೇಶನ ದ ಮೇರೆಗೆ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸು ವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದ್ದಾರೆ.
ಮಂಗಳವಾರ ನಗರದ ಬೋಂಡಾ ಫ್ಯಾಕ್ಟರಿ ಯಿಂದ ಖರೀದಿಸಿ ತಂದಿದ್ದ ಬೊಂಡಾ ನೀರು ಕುಡಿದ ನಂತರ ತೀವ್ರವಾದ ವಾಂತಿ ಬೇದಿ ಶುರುವಾಗಿದ್ದು, ಬೊಂಡಾ ನೀರು ಕುಡಿದ ಒಂದು ಮಗು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದೆ. ಉಪವಾಸದ ಸಮಯದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಬೊಂಡ ನೀರನ್ನು ಖರೀದಿಸಿದ್ದು ಸಾಯಂಕಾಲದ ಹೊತ್ತಿಗೆ ಬೊಂಡಾ ನೀರಿಗಾಗಿ ಮುಗಿಬೀಳುತ್ತಿದ್ದರು, ಮತ್ತು ಇವರ ಬೇಡಿಕೆ ಪೂರೈಸಲು ಫ್ಯಾಕ್ಟರಿಯವರು ಬೆಳಿಗ್ಗಿನ ಹೊತ್ತು ಸಂಗ್ರಹಿಸಿದ ನೀರನ್ನು ಕೆಡದಂತೆ ಮಾಡಲು ಯಾವುದೋ ರಾಸಾಯನಿಕ ಬೆರೆಸುವ ಬಗ್ಗೆ ಗುಮಾನಿ ಇದೆ, ಮತ್ತು ಆ ರಾಸಾಯನಿಕದಿಂದಾಗಿಯೇ ಇವತ್ತು ಬೊಂಡಾ ನೀರು ಕುಡಿದ ಜನ ವಾಂತಿ ಬೇದಿಯಿಂದ ನರಳಿದ್ದಾರೆ ಎಂಬ ಸಂಶಯವಿದೆ. ಅಡ್ಯಾರು ಪಂಚಾಯತಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಮಂಗಳೂರಿನ ಆಹಾರ ಇಲಾಖೆಯ ಅಧಿಕಾರಿಗಳು ಬೊಂಡಾ ಫ್ಯಾಕ್ಟರಿಗೆ ದಾಳಿ ನಡೆಸಿ ಬೊಂಡಾ ನೀರನ್ನು ಪರೀಶೀಲಿಸಿ, ತಪ್ಪು ಕಂಡು ಬಂದಲ್ಲಿ ಬೊಂಡಾ ಫ್ಯಾಕ್ಟರಿಯ ವಿರುಧ್ದ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ವಾಟ್ಸಾಪ್ ಸಂದೇಶವೊಂದು ಇಂದು ಹರಿದಾಡುತ್ತಿದೆ.