ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳಿಗೆ ಪೋತ್ಸಾಹ ಅಗತ್ಯ: ಅಜಿತ್ ಕುಮಾರ್ ರೈ
ಬಂಟ ಕ್ರೀಡೋತ್ಸವ ಉದ್ಘಾಟನೆ
ಮಂಗಳೂರು, ಸೆ.10: ಕ್ರೀಡೆಯಲ್ಲಿ ತೊಡಗಿಕೊಂಡಾಗ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಹಾಗಾಗಿ ಕ್ರೀಡೆಯಲ್ಲಿ ತೊಡಗಿಕೊಳ್ಳುವ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ತಿಳಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರಿ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ವಿವಿಧ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ನಗರದ ಬಂಟ್ಸ್ ಹಾಸ್ಟೇಲ್ನ ಓಂಕಾರ್ ನಗರದಲ್ಲಿ ರವಿವಾರ ನಡೆದ ಬಂಟ ಕ್ರೀಡೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಪಟು ಶಾರ್ವಿ ಶೆಟ್ಟಿ ಶುಭ ಹಾರೈಸಿದರು.
ಬಂಟರ ಮಾತೃಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಕೃಷ್ಣ ಪ್ರಸಾದ್ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಜಿಲ್ಲಾ ಸಂಚಾಲಕ ನಾಗರಾಜ ಶೆಟ್ಟಿ, ಸಂಚಾಲಕರಾದ ವಸಂತ ಶೆಟ್ಟಿ, ಉಲ್ಲಾಸ್ ಆರ್. ಶೆಟ್ಟಿ, ಸುಧಾಕರ ಎಸ್. ಪೂಂಜಾ, ಜಯರಾಮ ಸಾಂತ, ಆಶಾ ಜ್ಯೋತಿ ರೈ, ಕ್ರೀಡಾ ಕೂಟ ಆಯೋಜಕರಾದ ನಂದ ಕಿಶೋರ್ ಶೆಟ್ಟಿ, ಮೀನಾ ರಘು ಶೆಟ್ಟಿ, ಸುಲತಾ ಶೆಟ್ಟಿ, ಪ್ರತಿಮಾ ಶೆಟ್ಟಿ, ಅಕ್ಷತಾ ಶೆಟ್ಟಿ ಎಡ್ಮೆಮಾರ್, ಮಣೀಶ್ ಶೆಟ್ಟಿ, ಕಿಶೋರ್ ಭಂಡಾರಿ, ಅಶ್ವಥಾಮ ಶೆಟ್ಟಿ, ದಯಾನಂದ ಮಾಡ, ಸುಜಾತಾ ಶೆಟ್ಟಿ, ರಿತೇಶ್ ಶೆಟ್ಟಿ, ಮಲ್ಲಿಕಾ ಭಂಡಾರಿ ಸತೀಶ್ ಭಂಡಾರಿ, ವರುಣ್ ಶೇಣವ, ಸಚಿನ್ ಆಳ್ವ, ನರೇಶ್ ಆಳ್ವ, ಸದಾಶಿವ ಶೆಟ್ಟಿ, ಕೃಷ್ಣ ಶೆಟ್ಟಿ, ಚಿತ್ರಾ ಜೆ. ಶೆಟ್ಟಿ ಸುರತ್ಕಲ್, ಭವ್ಯಾ ಎ. ಶೆಟ್ಟಿ ಸುರತ್ಕಲ್, ಮಾಲತಿ ಜೆ. ಶೆಟ್ಟಿ ಸುರತ್ಕಲ್, ಸವಿತಾ ಬಿ.ಶೆಟ್ಟಿ ಸುರತ್ಕಲ್ ಉಪಸ್ಥಿತರಿದ್ದರು.
ಬಂಟ ಕ್ರೀಡೋತ್ಸವದ ಸಂಚಾಲಕ ಕಿರಣ್ ಪಕ್ಕಳ ಸ್ವಾಗತಿಸಿದರು. ಸಂಚಾಲಕಿ ಎನ್.ನಿವೇದಿತಾ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಕಾರ್ಯಕ್ರಮ ನಿರೂಪಿಸಿದರು.