ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ
ಮಂಗಳೂರು: ಯೆನಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ-ಮಂಗಳೂರು ಇದರ ಇಎನ್ಟಿ ವಿಭಾಗದ ವತಿಯಿಂದ ಕರ್ನಾಟಕ ಸರಕಾರದ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯಡಿಯಲ್ಲಿ ಮೊದಲ ಬಾರಿ 2 ವರ್ಷದ ಜನ್ಮಜಾತ ಕಿವುಡುತನವುಳ್ಳ ಮಗುವಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಆಸ್ಪತ್ರೆಯ ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಡಾ. ದೀಕ್ಷಿತ್ ರಾಜಮೋಹನ್ ಅವರು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯ ಹಿರಿಯ ಸಲಹೆಗಾರ ಮತ್ತು ಸಿಐ ಶಸ್ತ್ರಚಿಕಿತ್ಸಕ ಡಾ. ರಮೇಶ್ ಕೌಲ್ಗುಡ್ ಅವರ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರು.
ಶಸ್ತ್ರಚಿಕಿತ್ಸೆಯ ನಂತರ ಕಾಕ್ಲಿಯರ್ ಇಂಪ್ಲಾಂಟ್ ೩೯ಸ್ವಿಚ್-ಆನ್‌೩೯ ಕಾರ್ಯಕ್ರಮವನ್ನು ವಾಕ್ ಮತ್ತು ಶ್ರವಣ ವಿಭಾಗದ ಪ್ರೊ. ಡಾ.ಜಯಶ್ರೀ ಭಟ್ ಮಾರ್ಗದರ್ಶನದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ನಿಮಲ್ಕಾ, ಮತ್ತು ಅಸೋಸಿಯೆಟ್ ಪ್ರೊಫೆಸರ್ ಶ್ವೇತಾ ಪ್ರಭು ಆಸ್ಪತ್ರೆ ತಂಡ ನಡೆಸಿದೆ.
ಈ ಕಾರ್ಯಕ್ರಮದಲ್ಲಿ ಯೆನಪೋಯ ವಿವಿ ರಿಜಿಸ್ಟ್ರಾರ್ ಡಾ. ಗಂಗಾಧರ ಸೋಮಯಾಜಿ , ಪ್ರಾಂಶುಪಾಲ ಎಂ.ಎಸ್.ಮೂಸಬ್ಬ ,ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರಹ್ಮಾನ್ ಮತ್ತು ಇಎನ್ಟಿ ಎಚ್‌ಒಡಿ ಡಾ. ಸಾಯಿಮನೋಹರ್ ಉಪಸ್ಥಿತರಿದ್ದು ,ಪೋಷಕರಿಗೆ ಕಾಕ್ಲಿಯರ್ ಇಂಪ್ಲಾಂಟ್ ಕಿಟ್ ಅನ್ನು ಹಸ್ತಾಂತರಿಸಿದರು.