ಉಳ್ಳಾಲ: ಬಿಜೆಪಿಯ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ಮೌನ ಪ್ರತಿಭಟನೆ
ಉಳ್ಳಾಲ, ಜು.12: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ದ ಬಿಜೆಪಿ ನಡೆಸುತ್ತಿರುವ ದ್ವೇಷ ರಾಜಕಾರಣವನ್ನು ಖಂಡಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೌನ ಪ್ರತಿಭಟನೆ ತೊಕ್ಕೊಟ್ಟು ಬಸ್ ನಿಲ್ದಾನದಲ್ಲಿ ಬುಧವಾರ ನಡೆಯಿತು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಪಕ್ಷದ ಅಗ್ರಗಣ್ಯ ನಾಯಕರಾದ ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಧೋರಣೆಯನ್ನು ಖಂಡಿಸಿ ಈ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಮರಳಿ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಉಳ್ಳಾಲ ಬ್ಲಾಕ್ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಸುರೇಖಾ ಚಂದ್ರಹಾಸ್, ಜಬ್ಬಾರ್ ಬೋಳಿಯಾರ್, ವಿಲ್ಮಾ ಆಲ್ಫ್ರೆಡ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷ ಟಿ.ಎಸ್ ಅಬ್ದುಲ್ಲ, ಸದಸ್ಯರಾದ ಅಬ್ದುಲ್ ರಹ್ಮಾನ್ ಕೋಡಿಜಾಲ್ ಮತ್ತು ದೇವಕಿ ಉಳ್ಳಾಲ್, ರವಿರಾಜ್ ಶೆಟ್ಟಿ ದೇರಳೆಕಟ್ಟೆ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಂಪಲ, ಉಳ್ಳಾಲ ಬ್ಲಾಕ್ ಮಹಿಳಾ ಅಧ್ಯಕ್ಷ ಚಂದ್ರಿಕಾ ರೈ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಕೆ.ರಹ್ಮಾನ್ ಕೋಡಿಜಾಲ್, ಕಾರ್ಯದರ್ಶಿ ಮನ್ಸೂರ್ ಮಂಚಿಲ, ಉಳ್ಳಾಲ ನಗರಸಭೆ ಮಾಜಿ ಸದಸ್ಯ ದಿನೇಶ್ ರೈ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪಿಲಾರ್, ಬಶೀರ್ ಕೊಳಂಗರೆ, ಸುಕುಮಾರ್ ಗಟ್ಟಿ, ಸತೀಶ್ ಉಳ್ಳಾಲ್, ಕೊಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ದೇವಣ್ಣ ಶೆಟ್ಟಿ, ಯೂಸುಫ್ ಬಾವ, ಸೋಮೇಶ್ವರ ವಲಯ-2 ಕಾಂಗ್ರೆಸ್ ಅಧ್ಯಕ್ಷ ನಾಸಿರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಣತಾಲಗಳ ಮುಖ್ಯಸ್ಥ ಅಶ್ರಫ್ ಕೆ.ಸಿ.ರೋಡ್, ಸುದರ್ಶನ್ ಶೆಟ್ಟಿ, ಡೆನ್ನಿಸ್ ಡಿಸೋಜ, ಅಹ್ಮದ್ ಅಜ್ಜಿನಡ್ಕ, ಟಿ.ಎಸ್ ನಾಸೀರ್ ಸಾಮಾನಿಗೆ, ಮೊಹ್ಸೀರ್ ಸಾಮಾನಿಗೆ, ಹಮೀದ್ ಹಸನ್, ಪುಷ್ಠಿ ಮುಹಮ್ಮದ್,ಉಳ್ಳಾಲ ಬ್ಲಾಕ್ ಇಂಟಕ್ ಅಧ್ಯಕ್ಷೆ ಕಲಾವತಿ, ಜಸಿಂತಾ ಡಿಸೋಜ, ಪ್ರಭಾವತಿ ಶೆಟ್ಟಿ, ಶಾಲಿನಿ ಶೆಟ್ಟಿ, ಯೂಸುಫ್ ಉಳ್ಳಾಲ್, ಝಿಯಾದ್, ಪ್ರೇಮ್ ಕೊಲ್ಯ, ಅಬ್ದುಲ್ ಸತ್ತಾರ್ ಸಿ.ಎಂ., ಇಕ್ಬಾಲ್ ಸಾಮಾನಿಗೆ, ಅಚ್ಯುತ ಗಟ್ಟಿ, ಖಾದರ್ ಉಳ್ಳಾಲ್, ಮುಹಮ್ಮದ್ ಬೋಳಿಯಾರ್, ಹಮೀದ್ ಮದುಪಾಡಿ, ಆಸಿಫ್ ಅಂಬಟಡಿ, ಇಸ್ಮಾಯೀಲ್ ದೊಡ್ಡಮನೆ, ವಿಜಯ್ ಕಿಲ್ಲೆ, ರಝಿಯಾ ಇಬ್ರಾಹೀಂ, ರಿಚರ್ಡ್ ವೇಗಸ್, ವಾರಿಜಾ, ರಾಮಚಾರಿ, ಇಕ್ಬಾಲ್ ಎಚ್.ಆರ್., ನವೀನ್ ಡಿಸೋಜ, ವಿನೋದ್, ದಮಯಂತಿ, ಸುರೇಶ್ ಫೆರಾವೋ, ಹೇಮಾ ಕಾಪಿಕಾಡ್, ರಾಜು ಬಂಡಸಾಲೆ, ತಂಝೀಲ್ ಅಳೇಕಲ, ಜೈ ಹಿಂದ್ ಇಫ್ತಿಕಾರ್ ತೊಕ್ಕೊಟ್ಟು, ಐಡಾ ಲೋಬೋ, ರೂಪೇಶ್ ಭಟ್ನಗರ, ಮ್ಯಾಕ್ಸಿಮ್ ಡಿಸೋಜ, ಗೋಪಾಲ್ ತಲಪಾಡಿ ಮೊದಲಾದವರು ಉಪಸ್ಥಿತರಿದ್ದರು.