ದಕ್ಷಿಣ ಕನ್ನಡ ಜಿ.ಪಂ. ಮಾಜಿ ಅಧ್ಯಕ್ಷೆ ಸುಶ್ಮಾ ಜನಾರ್ದನ್ ನಿಧನ
ತೊಕ್ಕೊಟ್ಟು: ದಕ್ಷಿಣ ಕನ್ನಡ ಜಿಲ್ಲಾ ಪಂ. ಮಾಜಿ ಅಧ್ಯಕ್ಷೆ ಸುಷ್ಮಾ ಜನಾರ್ಧನ್ (56) ಅನಾರೋಗ್ಯದಿಂದ ಬುಧವಾರ ದೇರಳಕಟ್ಟೆ ಕಾಯರ್ ಪಳಿಕೆಯ ಸ್ವಗೃಹದಲ್ಲಿ ನಿಧನರಾದರು.
ಪದವೀಧರೆಯಾಗಿದ್ದ ಅವರು ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕಿ, ಭಾರತೀಯ ಜೀವವಿಮಾ ನಿಗಮದ ಹಿರಿಯ ಪ್ರತಿನಿಧಿಯಾಗಿದ್ದರು. ಬಿಜೆಪಿ ಕಾರ್ಯಕರ್ತೆಯಾಗಿ ಹಂತಹಂತವಾಗಿ ಮೇಲೇರಿ ಜಿ.ಪಂ.ಅಧ್ಯಕ್ಷ ಸ್ಥಾನಕ್ಕೇರಿದ್ದರು. ಹಲವು ವರ್ಷಗಳ ಹಿಂದೆ ತೊಕ್ಕೊಟ್ಟಿಗೆ ವಾಸಸ್ಥಳ ಬದಲಿಸಿಕೊಂಡಿದ್ದರು.
ಮೃತರಿಗೆ ಪತಿ, ಇಬ್ಬರು ಪುತ್ರರು ಇದ್ದಾರೆ.
ಮೃತರ ಅಂತಿಮ ಸಂಸ್ಕಾರ ನಾಳೆ ಮಧ್ಯಾಹ್ನ ಅವರ ಸ್ವಗೃಹದಲ್ಲಿ ಜರುಗಲಿದೆ.
Next Story