ಬಾಣಂತಿ ಸಾವು ಪ್ರಕರಣ: ನ್ಯಾಯಕ್ಕೆ ಆಗ್ರಹಿಸಿ ರಾಜ್ಯ ವಿಧಾನಸಭಾಧ್ಯಕ್ಷರಿಗೆ ಮನವಿ
ಮಂಗಳೂರು:ನಗರದ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷ್ಯತನದಿಂದ ವೇಣೂರಿನ ಬಾಣಂತಿಯ ಸಾವು ಸಂಭವಿಸಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಬೇಜವಾಬ್ದಾರಿ ತೋರಿದ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ವರ್ಗದ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಸಮುದಾಯದ ಮುಖಂಡರು, ಜಾಗೃತ ಮಹಿಳಾ ವೇದಿಕೆ ಸಹಿತ ವಿವಿಧ ಸಂಘಟನೆಗಳು ರಾಜ್ಯ ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್‌ಗೆ ಮನವಿ ಸಲ್ಲಿಸಿದೆ.
ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ವೈದ್ಯಕೀಯ ಅಧೀಕ್ಷಕ ಡಾ. ಕಿಶೋರ್ ಅವರನ್ನು ಕೂಡ ನಿಯೋಗ ಭೇಟಿಯಾಗಿ ಸಂತ್ರಸ್ತ ಕುಟುಂಬಕ್ಕೆ ಸರಕಾರದಿಂದ ನೆರವು ಹಾಗೂ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿಕೊಂಡಿದೆ.
ಮನವಿ ಸಲ್ಲಿಸಿದ ನಿಯೊಗದಲ್ಲಿ ಮೃತಳ ಪತಿ ಪ್ರದೀಪ್ ಆಚಾರ್ಯ, ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್.ಹರೀಶ್, ಜಾಗೃತ ಮಹಿಳಾ ವೇದಿಕೆಯ ಪವಿತ್ರಾ ಆಚಾರ್ಯ, ಪ್ರಮುಖರಾದ ಪ್ರಕಾಶ್ ಆಚಾರ್ಯ ಹಲೇಜಿ, ನಿತೇಶ್ ಆಚಾರ್ಯ, ಯೊಗೀಶ್ ಆಚಾರ್ಯ ಮುಡಿಪು ಮತ್ತಿತರರಿದ್ದರು.
Next Story