ದೇರಳಕಟ್ಟೆ: ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಿಲಾನ್ಯಾಸ

ದೇರಳಕಟ್ಟೆ: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಲಾಲ್ ಬಾಗ್ 12ನೇ ವಾಡ್೯ ನಿಂದ 13ನೇ ವಾಡ್೯ಗೆ ಸಂಪರ್ಕ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಕೋಟೆಕಾರು ಪಟ್ಟಣ ಪಂಚಾಯತ್ ನ15ನೇ ಹಣಕಾಸ್ ಯೋಜನೆಯಡಿಯಲ್ಲಿ ನಿರ್ಮಾಣವಾಗುವ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಸಮಾಜಿಕ ಮುಖಂಡ, ಜಲಾಲ್ ಬಾಗ್ ಅರಫ ಜಮಾ ಮಸೀದಿಯ ಆಧ್ಯಕ್ಷ ಎ.ಎ ಹೈದರ್ ಪರ್ತಿಪ್ಪಾಡಿ ಚಾಲನೆ ನೀಡಿದರು.
ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯೆ ಆಯಿಷಾ ಡಿ.ಅಬ್ಬಾಸ್, ಮಾಜಿ ಸದಸ್ಯ ಡಿ.ಎಂ ಮೊಹಮ್ಮದ್, ಸಮಾಜಸೇವಕ ಪಿ.ಎಂ ಇಬ್ರಾಹಿಂ ಕತ್ತಾರ್, ಸ್ಥಳದಾನಿ ಲವೀನಾ ಡಿಸೋಜಾ, ಜಲಾಲ್ ಬಾಗ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಅಲಿ ಹಸನ್, ಪ್ರ.ಕಾರ್ಯದರ್ಶಿ ಹಮೀದ್ ಪಜೀರ್, ಎಸ್ಕೆ ಎಸ್ಸೆಸ್ಸೆಫ್ ದೇರಳಕಟ್ಟೆ ಅಧ್ಯಕ್ಷ ಡಿ.ಎಂ ಫೈಝಲ್, ಉದ್ಯಮಿಗಳಾದ ಎಸ್.ಎ ಝೀರಾರ್ ಅಬ್ದುಲ್ಲಾ, ಡಿ.ಎಂ ರಿಯಾಝ್,
ಸ್ಥಳೀಯರಾದ ಮೊಹಮ್ಮದ್, ಹಮೀದ್, ಸಫೀಯಾ ಉಪಸ್ಥಿತರಿದ್ದರು.
Next Story