ದೇರಳಕಟ್ಟೆ: ಕ್ಷೇಮದಲ್ಲಿ ಚರ್ಮರೋಗ ಸಂಬಂಧಿತ ರಾಷ್ಟ್ರೀಯ ಸಮ್ಮೇಳನ
ಕೊಣಾಜೆ: ಚರ್ಮರೋಗಕ್ಕೆ ತುತ್ತಾದ ಮನುಷ್ಯನಲ್ಲಿ ಕ್ರಮೇಣ ರೋಗ ನಿವಾರಣೆಯ ಬಗ್ಗೆ ಧನಾತ್ಮಕ ಭಾವನೆ ಮೂಡಿಸುವುದರೊಂದಿಗೆ, ಚರ್ಮರೋಗ ಬರದಂತೆಯೂ ತಡೆಯಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಯೆನೆಪೋಯ ಅಬ್ದುಲ್ಲ ಕುಂಞಿ ಹೇಳಿದರು.
ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕ್ಷೇಮ ಆವಿಷ್ಕಾರ್ ಸಭಾಂಗಣದಲ್ಲಿ ಪಿಗ್ಮೆಂಟರಿ ಡಿಸಾರ್ಡರ್ಸ್ ಸೊಸೈಟಿ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ,ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಹಾಗೂ ಕರಾವಳಿ ಡರ್ಮಟಾಲೋಜಿಸ್ಟ್ ಸೊಸೈಟಿ -24 ಮತ್ತು ದೇರಳಕಟ್ಟೆಯ ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ 6ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನವನ್ನು ಶನಿವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಡಾ. ಸುರಭಿ ಸಿನ್ಹಾ ಬಿಡುಗಡೆಗೊಳಿಸಿದರು.
ಡೀನ್ ಡಾ. ಜಯಪ್ರಕಾಶ್ ಶೆಟ್ಟಿ ಸಮ್ಮೇಳನದ ಕುರಿತು ಮಾತನಾಡಿದರು.
ಪಿಗ್ಮೆಂಟರಿ ಡಿಸಾರ್ಡರ್ಸ್ ಸೊಸೈಟಿ ಅಧ್ಯಕ್ಷೆ ಡಾ.ರಶ್ಮಿ ಸರ್ಕಾರ್ ಅಧ್ಯಕ್ಷತೆ ವಹಿಸಿದ್ದರು.ಸಂಘಟನಾ ಕಾರ್ಯದರ್ಶಿ ಡಾ.ಗಿರೀಶ ಬಿ.ಎಸ್, ಡಾ. ಮಾಲಾ ಭಲ್ಲಾ, ಡಾ. ಶ್ರೀಚರಿತ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಘಟಕ ಡಾ. ವಿಶಾಲ್ ಅಮೀನ್ ಬಿ. ಸ್ವಾಗತಿಸಿದರು. ಸಮ್ಮೇಳನದ ಸಂಯೋಜಕ ಡಾ.ಮಂಜುನಾಥ್ ಶೆಣೈ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸ್ಪಂದನಾ ಹೆಗ್ಡೆ ಅತಿಥಿಗಳನ್ನ ಪರಿಚಯಿಸಿದರು.ಡಾ.ಭವೇಶ್ ಸ್ವರ್ಣಕರ್ ವಂದಿಸಿದರು.