ದೇರಳಕಟ್ಟೆ: ನಿಟ್ಟೆ ವಿವಿಯಲ್ಲಿ ಸ್ವಾತಂತ್ರ್ಯೋತ್ಸವ
ಕೊಣಾಜೆ: ದೇರಳಕಟ್ಟೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ವತಿಯಿಂದ ಕೆ.ಎಸ್ ಹೆಗ್ಡೆ ಆಡಿಟೋರಿಯಂನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್ ಧರ್ಮ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ವೈದ್ಯರು ದೇಶದೊಳಗಿರುವ ರೋಗಗಳ ಶುಶ್ರೂಷಕರಾಗಬೇಕಿದೆ. ಜನರಲ್ಲಿರುವ ಬಡತನ ವನ್ನು ದೂರವಾಗಿಸಿ ಸಮಗ್ರತೆ, ಸಮಾನತೆಯನ್ನು ಕಾಪಾಡುವ ಉದ್ದೇಶದಿಂದ ಶುದ್ಧ ಹೃದಯಗಳನ್ನು ನೆಲೆಯೂರಲು ಶಸ್ತçಚಿಕಿತ್ಸೆ ಶುಶ್ರೂಷೆಯನ್ನು ನಡೆಸುವ ಮೂಲಕ ೭೭ ವರ್ಷಗಳಿಂದ ಪುನರಾವರ್ತನೆ ಆಗುವ ಕೆಡುಕುಗಳನ್ನು ದೂರವಾಗಿ ಸುವ ಪಣತೊಡಿ. ನಾಯಕರೆಲ್ಲರೂ ತ್ಯಾಗ ನಡೆಸಿ ದೇಶಕ್ಕಾಗಿ ದುಡಿದವರು. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಗಳಿ ಸಲು ಹೋರಾಡಿ, ಶಿಕ್ಷಕರು ದುಡಿಯುವತ್ತ ಕೇಂದ್ರೀಕರಿಸಿ ತಮ್ಮ ಜವಾಬ್ದಾರಿಗಳನ್ನು ರಾಷ್ಟಿಯತೆಯೊಂದಿಗೆ ಗೌರವಿಸಿ ಮುಂದುವರಿದಾಗ ಎಲ್ಲವನ್ನು ಜಯಿಸಲು ಸಾಧ್ಯ ಎಂದರು.
ನಿಟ್ಟೆ ವಿ.ವಿ ಕುಲಪತಿ ಡಾ.ಎಂ.ಎಸ್ ಮೂಡಿತ್ತಾಯ, ವಿಶ್ರಾಂತ ಉಪಕುಲಪತಿ ಡಾ ಸತೀಶ್ ಕುಮಾರ್ ಭಂಡಾರಿ, ಕುಸಚಿವ ಡಾ. ಹರ್ಷ ಹಾಲಹಳ್ಳಿ, ವೈಸ್ ಡೀನ್ ಡಾ. ಜೆ.ಪಿ ಶೆಟ್ಟಿ, ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಫಾತಿಮ ಡಿಸಿಲ್ವಾ, ಸಂಶೋಧನಾ ವಿಭಾಗದ ಅಲ್ಕಾ ಕುಲಕರ್ಣಿ ಉಪಸ್ಥಿತರಿದ್ದರು.