ದೇರಳಕಟ್ಟೆ: ಎಸ್ ವೈ ಎಸ್ ವತಿಯಿಂದ ರಾಷ್ಟ್ರ ರಕ್ಷಾ ಸಂಗಮ
ಉಳ್ಳಾಲ: ಸ್ವಾತಂತ್ರ್ಯ ಸಮರಕ್ಕಾಗಿ ಬಹಳಷ್ಟು ಶ್ರಮವಹಿಸಿದವರಲ್ಲಿ ಮುಸ್ಲಿಮರು ಇದ್ದಾರೆ. ಸಿಕ್ಕಿದ ಸ್ವಾತಂತ್ರ್ಯ ವನ್ನು ಒಳ್ಳೆಯ ಹಾದಿಯಲ್ಲಿ ಸದುಪಯೋಗ ಪಡಿಸಿಕೊಂಡರೆ ರಾಷ್ಟ್ರ ರಕ್ಷಣೆ ಸಾಧ್ಯ ಎಂದು ಬಂಬ್ರಾಣ ಉಸ್ತಾದ್ ಹೇಳಿದರು.
ಅವರು ಎಸ್ ವೈ ಎಸ್ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ ಮಂಗಳವಾರ ದೇರಳಕಟ್ಟೆಯ ಸಿಟಿ ಗ್ರೌಂಡ್ ನಲ್ಲಿ ನಡೆದ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಸ್ಮಾನ್ ಫೈಝಿ ತೋಡಾರ್ ಮಾತನಾಡಿ, ರಾಷ್ಟ್ರ ರಕ್ಷಣೆ ಮಾಡಬೇಕು ಎಂಬ ಗುರಿ ನಮ್ಮಲ್ಲೂ ಇದೆ. ಇದಕ್ಕಾಗಿ ನಮ್ಮ ಸಹಕಾರ ನೀಡುವುದರಲ್ಲಿ ಕೊರತೆ ಇಲ್ಲ. ಅಬ್ದುಲ್ ಕಲಾಂ ಅಝಾದ್ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ್ದಾರೆ. ಇನ್ನು ಮುಂದೆಯೂ ರಾಷ್ಟ್ರ ರಕ್ಷಣೆ ಹಿಂದೆ ನಾವಿದ್ದೇವೆ ಎಂದು ಹೇಳಿದರು.
ಲಕ್ಷದ್ವೀಪ ಮಾಜಿ ಸಂಸದ ಹಂದುಲ್ಲ ಸಯೀದ್ ಮಾತನಾಡಿ, ಇಂದಿನ ಕಾರ್ಯ ಚಟುವಟಿಕೆ, ಆಡಳಿತ ಭಿನ್ನ ರೀತಿಯಲ್ಲಿ ನಡೆಯುತ್ತಿದೆ.ಆಡಳಿತಕ್ಕಿಂತ ದೇಶ ರಕ್ಷಣೆ ನಾವು ಮಾಡಬೇಕು.ಇದು ನಮ್ಮ ಜವಾಬ್ದಾರಿ ಕೂಡಾ ಆಗಿದೆ ಎಂದರು.
ಲಕ್ಷ್ಮೀಶ ಗುಬ್ಬಡ್ಕ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಯಾರೂ ಜಾತಿ, ಆರಾಧನೆ ಕಡೆ ನೋಡಲಿಲ್ಲ. ಟಿಪ್ಪು ಆಡಳಿತ ಕಾಲದಲ್ಲಿ ದೇವಸ್ಥಾನ ನಾಶ ಆಗಿತ್ತು.ಅಷ್ಟೇ ಜೀರ್ಣೋದ್ಧಾರ ಕೂಡಾ ಆಗಿತ್ತು. ಅವರ ನಂತರದ ಆಡಳಿತ ದಲ್ಲೂ ದೇವಸ್ಥಾನ ನಾಶ ಆಗಿದೆ ಅಷ್ಟೇ ಜೀರ್ಣೋದ್ಧಾರ ಕಂಡಿದೆ. ನಾವು ರಾಜರ ವಿಚಾರದಲ್ಲಿ ಕಟ್ಟು ಕಥೆ ಕಟ್ಟುವ ಬದಲು ಭೌವಿಷ್ಯ ನೋಡೋಣ ಎಂದು ಕರೆ ನೀಡಿದರು.
ಅಬ್ದುಲ್ ಅಝೀಝ್ ದಾರಿಮಿ ಪ್ರತಿಜ್ಞಾ ಬೋಧನೆ ಮಾಡಿ ರಾಷ್ಟ್ರ ರಕ್ಷಣೆಗಿರುವ ವಿವಿಧ ದಾರಿ ಮತ್ತದರ ಉಪಯೋಗದ ಬಗ್ಗೆ ವಿವರಿಸಿದರು.
ಸಯ್ಯಿದ್ ಝೈನುಲ್ ಆಬಿದಿನ್ ತಂಙಳ್ ದುಆ ನೆರವೇರಿಸಿದರು.
ಮಾದಕ ವ್ಯಸನ ವಿರುದ್ಧ ಜನಜಾಗೃತಿ ಅಭಿಯಾನ ವನ್ನು ಅಬೂಬಕ್ಕರ್ ಹಾಜಿ ಸ್ವಾಗತ್ ಉದ್ಘಾಟಿಸಿದರು.
ತಬೂಕು ಅಬ್ದುಲ್ ರಹಿಮಾನ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ.ದಾರಿಮಿ ದಿಕ್ಸೂಚಿ ಭಾಷಣ ಮಾಡಿದರು.ಮುಹಮ್ಮದ್ ಕುಟ್ಟಿ ನಿಝಾಮಿ ವಯನಾಡ್ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ಅಮೀರ್ ತಂಙಳ್, ಇರ್ಷಾದ್ ದಾರಿಮಿ, ಕುಕ್ಕಿಲ ದಾರಿಮಿ,ಕೆ.ಆರ್ ಹುಸೈನ್ ದಾರಿಮಿ, ಇಸಾಕ್ ಫೈಝಿ, ಇಬ್ರಾಹಿಂ ಕೊಣಾಜೆ, ರವೀಂದ್ರ ರೈ ಹರೇಕಳ,ಫಾದರ್ ಜಯಪ್ರಕಾಶ್ ಡಿಸೋಜ, ಇಬ್ರಾಹಿಂ ಕೋಡಿಜಾಲ್, ಅಝೀಝ್ ದಾರಿಮಿ, ಅಬೂಬಕ್ಕರ್ ಹಾಜಿ ದೇರಳಕಟ್ಟೆ, ಏಷಿಯನ್ ಬಾವಾ ಹಾಜಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಎಸ್.ಐ.ತಂಙಳ್,ಎಂ.ಹೆಚ್.ಹಾಜಿ,ಶಂಶುದ್ದೀನ್ ದಾರಿಮಿ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ತಾಜುದ್ದೀನ್ ದಾರಿಮಿ,ಅಬೂಸ್ವಾಲೀಹ್ ಫೈಝಿ,ಎಚ್.ಆರ್.ಇಕ್ಬಾಲ್ ದೇರಳಕಟ್ಟೆ, ಅಬ್ದುಲ್ ರಹಿಮಾನ್ ಹಾಜಿ, ಮಜೀದ್ ಹಾಜಿ ಸಿತಾರ್, ಅಝೀಝ್ ಫೈಝಿ, ಲತೀಫ್ ದಾರಿಮಿ, ಇಸ್ಮಾಯಿಲ್ ಯಮಾನಿ,ಸಯ್ಯದಾಲಿ, ಮುಹಮ್ಮದ್ ಪನೀರ್, ಹನೀಫ್ ಎಸ್.ಬಿ.ಅಶ್ರಫ್ ಮಾರಾಠಿಮೂಲೆ ಮತ್ತಿತರರು ಉಪಸ್ಥಿತರಿದ್ದರು.
ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿದರು. ಮುಸ್ತಫಾ ಫೈಝಿ ವಂದಿಸಿದರು.