ಯೆನೆಪೋಯ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ
ಮಂಗಳೂರು: ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಬಲ್ಮಠ-ಕೂಳೂರು ಮಂಗಳೂರು ಇದರ ಪದವಿ ಪ್ರದಾನ ಕಾರ್ಯಕ್ರಮವು ಸೋಮವಾರ ದೇರಳಕಟ್ಟೆಯ ಯೆನೆಪೋಯ ವಿವಿ ಆವರಣದ ಯೆಂಡ್ಯೂರೆನ್ಸ್ ವಲಯದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾತನಾಡಿ ನಿರಂತರವಾದ ಪ್ರಯತ್ನದಲ್ಲಿ ಬದುಕಿನ ಯಶಸ್ಸಿದೆ. ಸರಿಯಾದ ಮಾರ್ಗದಲ್ಲಿ ಮೂಲ ಉದ್ದೇಶವನ್ನು ಸಾಧಿಸುವ ಗುಣ ವಿದ್ಯಾರ್ಥಿ ದೆಸೆಯಿಂದಲೇ ಬೆಳೆಯಬೇಕು ಎಂದರು.
ಗೌರವ ಅತಿಥಿಗಳಾಗಿ ಅಜೋಲಿಸ್ ಬಯೋಸೈನ್ಸ್, ಪ್ರೈ.ಲಿ.ನ ನಿರ್ದೇಶಕ ಅದಿತಿ ಉಮೇಶ್, ರೈನ್‌ಟ್ರೀ ಮೀಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಪ್ರಧಾನ ಸಂಪಾದಕ ಸಂಧ್ಯಾ ಮೆಂಡೋನ್ಸಾ ಭಾಗವಹಿಸಿದ್ದರು.
ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್‌ನ ಪ್ರಾಂಶುಪಾಲ ಮತ್ತು ಡೀನ್ ಫ್ಯಾಕಲ್ಟಿ ಆಫ್ ಸೈನ್ಸ್ ಡಾ. ಅರುಣ್ ಎ. ಭಾಗವತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಯೆನೆಪೋಯ ವಿವಿಯ ಪ್ರೊ ವೈಸ್ ಚಾನ್ಸೆಲರ್ ಡಾ. ಬಿ.ಎಚ್. ಶ್ರೀಪತಿ ರಾವ್, ಪರೀಕ್ಷಾ ನಿಯಂತ್ರಕ ಡಾ.ಬಿ.ಟಿ. ನಂದೀಶ್, ಉಪ ಪ್ರಾಂಶುಪಾಲ ನಾರಾಯಣ್ ಸುಕುಮಾರ್ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲ ಮತ್ತು ಡೀನ್ ಫ್ಯಾಕಲ್ಟಿ, ವಾಣಿಜ್ಯ ಮತ್ತು ನಿರ್ವಹಣೆಯ ಡಾ. ಶರೀನಾ ಪಿ. ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ. ಜೀವನ್‌ರಾಜ್ ವಂದಿಸಿದರು. ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಚರಿತ್ರಾ ಹಾಗೂ ಸನ್ನಿಧಿ ಕಾರ್ಯಕ್ರಮ ನಿರೂಪಿಸಿದರು.