ದೇಶ ಬದಲಾಗಬೇಕಾದರೆ ಮೊದಲು ನಾವು ಬದಲಾಗಬೇಕು : ನಿಕೇತ್ ರಾಜ್ ಮೌರ್ಯ
ಎಸ್‌ಐಒ ದಕ್ಷಿಣ ಕನ್ನಡ ಘಟಕದ ವತಿಯಿಂದ ಜಿಲ್ಲಾ ಕಾನ್ಫರೆನ್ಸ್
ಉಳ್ಳಾಲ : ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ 'ಬದಲಾವಣೆಯ ಚಿಂತನೆಯನ್ನು ಮರು ಪರಿಶೀಲಿಸೋಣ' ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲಾ ಕಾನ್ಫರೆನ್ಸ್ ತೊಕ್ಕೊಟ್ಟಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಐಒ ರಾಷ್ಟ್ರೀಯ ಕಾರ್ಯದರ್ಶಿ ಅಡ್ವೊಕೇಟ್ ಅನೀಸ್ ಯು.ಆರ್. ರಹ್ಮಾನ್, ಕಾನ್ಫರೆನ್ಸ್ ಮೂಲಕ ಬಹಳಷ್ಟು ವಿಚಾರಗಳು ತಿಳಿದು ಕೊಳ್ಳಲು ಸಾಧ್ಯ ಆಗುತ್ತದೆ. ನಾವು ಜೊತೆಯಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡಿಕೊಂಡು ಸಾಮಾಜದ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ, ದೇಶ ಬದಲಾಗಬೇಕಾದರೆ ಮೊದಲು ನಾವು ಬದಲಾಗಬೇಕು. ಪ್ರಜಾಪ್ರಭುತ್ವದ ಉಳಿವಿಗಾಗಿ ಉತ್ಸಾಹದಿಂದ ನಾವು ಮುನ್ನುಗ್ಗಬೇಕು. ಮಾಧ್ಯಮಗಳು ಉದ್ಯಮಿಗಳ ಪರ ನಿಲ್ಲದೇ ಪ್ರಜಾಪ್ರಭುತ್ವ ಉಳಿಕೆ ಪರ ನಿಂತರೆ ಆ ಕೆಲಸ ಸಾಧ್ಯ. ನಾವು ಜಾತಿ ಧರ್ಮ ನೋಡದೆ ಪ್ರಜಾಪ್ರಭುತ್ವ, ದೇಶ ಅಭಿವೃದ್ಧಿಗೆ ಒತ್ತು ನೀಡೋಣ ಎಂದು ಕರೆ ನೀಡಿದರು.
ಝಿನೇರ ಹುಸೇನ್, ಜಮಾಅತೆ ಇಸ್ಲಾಮಿ ಕೇರಳ ಉಪಾಧ್ಯಕ್ಷ ವಿ.ಟಿ ಅಬ್ದುಲ್ಲಾ ಕೋಯ ತಂಙಳ್, ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಅಮೀರ್ ಗಫೂರ್ ಕುಳಾಯಿ ಮಾತನಾಡಿದರು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ರಾಷ್ಟ್ರಾಧ್ಯಕ್ಷ ರಮೀಝ್ ಇ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .
ಕಾರ್ಯಕ್ರಮದಲ್ಲಿ ಎಸ್‌ಐಒ ಕರ್ನಾಟಕ ರಾಜ್ಯಾಧ್ಯಕ್ಷ ಜೀಶಾನ್ ಅಖಿಲ್ ಸಿದ್ದೀಕಿ, ಸಲೀಂ ಮಂಬಾಡ್, ಜಮಾಅತೆ ಇಸ್ಲಾಮಿ ಕರ್ನಾಟಕ ಕಾರ್ಯದರ್ಶಿ ಮೊಹಮ್ಮದ್ ಕುಂಞ, ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ನಿಝಾಮ್ ಉಮರ್ ಮತ್ತಿತರರು ಉಪಸ್ಥಿತರಿದ್ದರು
ದಕ್ಷಿಣ ಕನ್ನಡ ಎಸ್‌ಐಒ ಜಿಲ್ಲಾಧ್ಯಕ್ಷ ಆಸಿಫ್ ಡಿ.ಕೆ ಸ್ವಾಗತಿಸಿದರು. ಮುಝಮ್ಮಿಲ್ ಅಬ್ಬಾಸ್ ಕಿರಾಅತ್ ಪಠಿಸಿದರು.