ಭಾವೈಕ್ಯತೆಯ ದೀಪಾವಳಿ ಆಚರಣೆಗೆ ದಶಮಾನದ ಸಂಭ್ರಮ: ಅ. 31ರಂದು ವಿವಿಧ ಸ್ಪರ್ಧೆ
ಮಂಗಳೂರು, ಅ.19: ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ನೇತೃತ್ವದಲ್ಲಿ ಆಚರಿಸಲಾಗುವ ಸರ್ವಧರ್ಮಗಳ ಭಾವೈಕ್ಯದ ದೀಪಾವಳಿ ಆಚರಣೆ ದಶಮಾನ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಅ. 31ರಂದು ಕುಣಿತ ಭಜನೆ, ಗೂಡುದೀಪ ರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಶಾಸಕ ಐವನ್ ಡಿಸೋಜಾ, ಕದ್ರಿ ಪರ್ಕ್‌ಿನ ಸುವರ್ಣ ಕಲಾ ಮಂಟದಲ್ಲಿ ಅ. 31ರಂದು ಸಂಜೆ 3 ಗಂಟೆಯಿಂದ ಚಿತ್ರಕಲಾ ಸ್ಪರ್ಧೆ, ಗೂಡುದೀಪ ಸ್ಪರ್ಧೆ ಹಾಗೂ ಕುಣಿತ ಭಜನೆ ಆಯೋಜಿಸಲಾಗಿದೆ ಎಂದರು.
ಸಂಜೆ 3 ಗಂಟೆಗೆ ನಾಲ್ಕು ಶ್ರೇಣಿಗಳಲ್ಲಿ ಚಿತ್ರಕಲಾ ಸ್ಪರ್ಧೆ ಹಾಗೂ ಆಧುನಿಕ ಮತ್ತು ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ ನಡೆಯಲಿದೆ. ಸಂಜೆ 4.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ಕುಣಿತ ಭಜನೆಯ ಸ್ಪರ್ಧೆ ನಡೆಯಿದೆ. ಕಳೆದ ವರ್ಷ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 400 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಅವರು ಹೇಳಿದರು.
ಕುಣಿತ ಭಜನೆ ಸ್ಪರ್ಧೆಯ ಪ್ರತಿ ತಂಡದಲ್ಲಿ 10 ಜನರಿಗಿಂತ ಮೇಲಿರಬಾರದು. 20 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿದ್ದು, ಪ್ರಥಮ ಬಹುಮಾನ 15,000 ರೂ., ದ್ವಿತೀಯ 10,000 ರೂ. ಹಾಗೂ ತೃತೀಯ 5000 ರೂ. ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೆ 1000 ರೂ. ಗೌರವ ಸಂಭಾವನೆ ನೀಡಲಾಗುವುದು.
ಚಿತ್ರಕಲಾ ಸ್ಪರ್ಧೆಯಲ್ಲಿ ದೀಪಾವಳಿಯ ವೈಶಿಷ್ಯದ ಬಗ್ಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರಾಥಮಿಕ, ಹೈಸ್ಕೂಲ್, ಪಿಯುಸಿ ಪದವಿ ಹಾಗೂ ಮೇಲ್ಪಟ್ಟ ವಯೋಮಾನದವರಿಗೆ ಮುಕ್ತ ಅವಕಾಶ. 45 ನಿಮಿಷಗಳ ಕಾಲಾವಕಾಶ ಇರಲಿದೆ. ಪ್ರಥಮ ಬಹುಮಾನವಾಗಿ 5000 ರೂ., ದ್ವಿತೀಯ 3000 ರೂ., ಹಾಗೂ ತೃತೀಯ 2000 ರೂ. ಬಹುಮಾನ ವಿರಲಿದ್ದು, ಪದಕ ಮತ್ತು ಪ್ರಮಾಣ ಪತ್ರ ನೀಡಲಾಗುವುದು.
ಗೂಡುದೀಪ ಸ್ಪರ್ಧೆಯು ಆಧುನಿಕ ಮತ್ತು ಸಾಂಪ್ರದಾಯಿಕ ವಿಭಾಗದಲ್ಲಿ ನಡೆಯಲಿದ್ದು, ಸ್ಪರ್ಧೆಯು ಕದ್ರಿ ಪಾರ್ಕಿನ ಒಳಗಡೆ ನಡೆಯಲಿರುವುದು ಹಾಗೂ ಈ ವರ್ಷ ದಶಮಾನೋತ್ಸವ ಅಂಗವಾಗಿ ಸುಮಾರು 300 ಗೂಡುದೀಪಗಳು ಭಾಗವಹಿಸುವ ನಿರೀಕ್ಷೆ ಇದೆ.
ಎರಡು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಥಮ 7000 ರೂ., ದ್ವಿತೀ, 5000 ರೂ., ಹಾಗೂ ತೃತೀಯ 3000 ರೂ. ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಗೌರವಧನ ಹಾಗೂ ಸಮಧಾನಕರ ಬಹುಮಾನ ನೀಡಲಾಗುವುದು ಎಂದು ಅವರು ವಿವರಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಜಿ. ನಾಗೇಂದ್ರ ಕುಮಾರ್ ಸಂಚಾಲಕತ್ವದಲ್ಲಿ ಸಮಿತಿ ರಚಿಸಲಾಗಿದೆ. ಚಿತ್ರಕಲಾ ಸ್ಪರ್ಧೆ ನೋಂದಣಿಗೆ ಪ್ರಗತಿ ಬೇಕಲ್ (9686261829), ಮೀನಾ ಟೆಲ್ಲಿಸ್(7022436831), ಬಬಿತಾ ಡಿ ಸೋಜ, ವಿದ್ಯಾ ತೋರಸ್, ವಿದ್ಯಾ ಅತ್ತಾವರ ಹಾಗೂ ಗೂಡುದೀಪ ಸ್ಪರ್ಧೆ ನೊಂದಾವಣೆಗಾಗಿ ಮಹೇಶ್ ಕೋಡಿಕಲ್ (9743597991), ವಿಕಾಸ್ ಶೆಟ್ಟಿ(9916021942), ಮನೀಶ್ ಬೋಳಾರ್, ಕುಣಿತ ಸ್ಪರ್ಧೆ ನೊಂದಾವಣಿಗಾಗಿ ಚಂದ್ರಹಾಸ್ ಕುಲಾಲ್(9964818276), ಭಾಸ್ಕರ್ ರಾವ್‌ರ ನ್ನು ಸಂಪರ್ಕಿಸಬಹುದಾಗಿದೆ. ಅ. 28 ನೋಂದಣಿಗೆ ಕೊನೆಯ ದಿನವಾಗಿರುತ್ತದೆ.
ಗೋಷ್ಟಿಯಲ್ಲಿ ಜೆ. ನಾಗೇಂದ್ರ ಕುಮಾರ್, ಸತೀಶ್ ಪೆಂಗಲ್, ಭಾಸ್ಕರ್ ರಾವ್, ಚಂದ್ರಹಾಸ್ ಕುಲಾಲ್, ಪ್ರಗತಿ ಬೇಕಲ್, ಮನೀಶ್ ಬೋಳಾರ, ಸಿರಾಜ್ ಬಜಪೆ, ಮನೋರಾಜ್ ಉಪಸ್ಥಿತರಿದ್ದರು.