ಮುಡಿಪು: ಡಿವೈಎಫ್ಐ ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್

ಬಾಳೆಪುಣಿ ಗ್ರಾಮ ಪಂಚಾಯತ್ ಗೆ ಒಳಪಟ್ಟ ಪ್ರದೇಶದ ಮುಡಿಪು ಪೇಟೆಯ ಮುಖ್ಯ ರಸ್ತೆಗೆ ತಾಗಿಕೊಂಡು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕುರ್ನಾಡು ಗ್ರಾಮ ಪಂಚಾಯತ್ ನ ತ್ಯಾಜ್ಯ ವಿಲೇವಾರಿ ಘಟಕವನ್ನು ತೆರವುಗೊಳಿಸಬೇಕಂಬ ಡಿವೈಎಫ್ಐ ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಮುಡಿಪು ಜಂಕ್ಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತ್ಯಾಜ್ಯ ವಿಲೇವಾರಿ ಘಟಕವನ್ನು ತೆರವುಗೊಳಿಸಿದೆ.
ತ್ಯಾಜ್ಯ ವಿಲೇವಾರಿ ಘಟಕದಿಂದಾಗಿ ಸಾರ್ವಜನಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹತ್ತಿರದಲ್ಲೆೇ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೂಡ ಇದ್ದು ವಿದ್ಯಾರ್ಥಿಗಳು ತೊಂದರೆಯನ್ನು ಅನುಭವಿಸುತ್ತಿದ್ದರು. ಮೂಕ ಪ್ರಾಣಿಗಳು ತ್ಯಾಜ್ಯ ವಿಲೇವಾರಿ ಘಟಕದ ಕೊಳೆತ ತ್ಯಾಜ್ಯಗಳನ್ನು ಹೊರ ತಂದು ರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದು ಇದರಿಂದ ರೋಗ ರುಜಿನಗಳು ಹರಡುತ್ತಿತ್ತು ಮತ್ತು ಹಲವಾರು ವಾಹನಗಳು ಕೂಡಾ ಅಪಘಾತಕ್ಕೀಡಾಗಿವೆ.
ಸಾರ್ವಜನಿಕರು ನಡೆದಾಡುವಾಗ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಸಾರ್ವಜನಿಕರು ಈ ತ್ಯಾಜ್ಯ ಘಟಕದಿಂದ ಬೇಸತ್ತು ಹೋಗಿದ್ದರು. ಈ ಕೂಡಲೇ ಪಂಚಾಯತ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಈ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು ತೆರವುಗೊಳಿಸಬೇಕಂದು ಡಿವೈಎಫ್ಐ ಮುಡಿಪು ಘಟಕದಿಂದ ಕುರ್ನಾಡು ಮತ್ತು ಬಾಳೆಪುಣಿ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಲಾಗಿತ್ತು.
ಇದೀಗ ಮುಡಿಪು ಪ್ರದೇಶದ ಜನರು ಹಲವಾರು ವರ್ಷಗಳಿಂದ ಎದುರಿಸುತ್ತಿದ್ದ ಸಮಸ್ಯೆಗೆ ತೆರೆ ಎಳೆದಂತಾಗಿದೆ. ಡಿವೈಎಫ್ಐ ಯ ಈ ನಡೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.