ಸಮುದಾಯದ ಸಬಲೀಕರಣಕ್ಕೆ ಶಿಕ್ಷಣವೇ ಪ್ರಧಾನ: ಸ್ಪೀಕರ್ ಯು.ಟಿ. ಖಾದರ್
ನೂರುಲ್ ಹುದಾ ಮಾಡನ್ನೂರು ದಶಮಾನೋತ್ಸವ, ಕ್ಯಾಂಟಿನ್ ಉದ್ಘಾಟನಾ ಸಮಾರಂಭ
ಪುತ್ತೂರು: ಸುಭದ್ರ ಸಮಾಜ ಸೃಷ್ಟಿಯಾಗಬೇಕಾದರೆ ಶಿಕ್ಷಣ ಅತ್ಯಗತ್ಯವಾಗಿದೆ. ಸುಶಿಕ್ಷಿತ ಸಮಾಜವನ್ನು ನಿರ್ಮಿಸುವುದ ಕ್ಕಿಂತಲೂ ಶ್ರೇಷ್ಟವಾದ ದೇಶಪ್ರೇಮವಿಲ್ಲ. ಶಿಕ್ಷಣದ ಮೂಲಕ ಯುವ ಪೀಳಿಗೆಯನ್ನು ಧಾರ್ಮಿಕವಾಗಿಯೂ ಸಾಮಾಜಿಕ ವಾಗಿಯೂ ಪ್ರಬುದ್ಧರನ್ನಾಗಿಸುವ ಕೆಲಸವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಹೇಳಿದರು.
ಮಾಡನ್ನೂರು ನೂರುಲ್ ಹುದಾ ಸಂಸ್ಥೆಯ ದಶಮಾನೋತ್ಸವ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ “ಶುಹದಾ’’ ಎಕ್ಸಲೆನ್ಸ್ ಅವಾರ್ಡ್ ಸ್ವೀಕರಿಸಿ ಮಾತನಾಡಿದ ಅವರು ಸಮಸ್ಯೆಗಳನ್ನು ಪರಿಹರಿಸುವವರಿಗಿಂತಲೂ ಸಮಸ್ಯೆ ಯನ್ನು ಹುಟ್ಟುಹಾಕುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಾವು ಮಿತ್ರರನ್ನು ಹುಡುಕುವ ಕೆಲಸ ಮಾಡಬೇಕೇ ಹೊರತು ಶತ್ರುಗಳನ್ನು ಸೃಷ್ಟಿಸುವವರಂತಾಗಬಾರದು. ಸಮಾಜದ ಸಾಮರಸ್ಯ ಕಾಪಾಡುವ ವ್ಯಕ್ತಿತ್ವ ರೂಪಿಸುವ ನವ ತಲೆಮಾರು ಬೆಳೆದು ಬರಬೇಕಿದ್ದು, ಸಮನ್ವಯ ಶಿಕ್ಷಣದಿಂದ ಅದು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ದಾರುಲ್ ಹುದಾ ಇಸ್ಲಾಮಿಕ್ಯೂನಿವರ್ಸಿಯ ಉಪಕುಲಪತಿ ಡಾ. ಬಹಾವುದ್ದೀನ್ ಮುಹಮ್ಮದ್ ನದ್ವಿ ಮಾತನಾಡಿ, ಪ್ರವಾದಿಯವರ ನೈಜ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸುವ ಮೂಲಕ ನೈಜ ಮುಸಲ್ಮಾನನಾಗಿ ಬದುಕುದಾದರೆ ಆತನಿಗೆ ಸಕಲ ಸಮಸ್ಯೆಗಳನ್ನು ಪರಿಹರಿಸಬಲ್ಲ ಸಾಮರ್ಥ್ಯ ರೂಪು ಗೊಳ್ಳುತ್ತದೆ. ಕೆಲವೊಂದು ಶಕ್ತಿಗಳು ಇಸ್ಲಾಂ ಧರ್ಮದ ಕುರಿತು ಜಾಗತಿಕವಾಗಿ ಅಪಸ್ವರಗಳು ಹುಟ್ಟು ಹಾಕಲ್ಪಡುತ್ತಿರು ವಾಗಲೇ ಮತ್ತೊಂದೆಡೆ ಇಸ್ಲಾಂ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಇಸ್ಲಾಂ ಧರ್ಮದ ಕುರಿತು ಅಧ್ಯಯನ ಮಾಡಲು ಆಸಕ್ತಿ ತೋರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಂತಹ ಸನ್ನಿವೇಶಗಳ್ಳಲಿ ಧರ್ಮದ ಸುಂದರವಾದ ಸಂದೇಶಗಳನ್ನು ಎಲ್ಲರಿಗೂ, ಎಲ್ಲಾ ಭಾಷೆಗಳಲ್ಲೂ ತಲುಪಿಸಲ್ಪಡುವ ಯುವ ವಿದ್ವಾಂಸ ಪಡೆಯನ್ನು ತಯಾರು ಮಾಡಬೇಕಾದದ್ದು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ, ಸಮಸ್ಥೆಯ ಪ್ರಾಂಶುಪಾಲರಾದ ಹನೀಫ್ ಹುದವಿ, ಧಾರ್ಮಿಕ-ಲೌಖಿಕ ಶಿಕ್ಷಣ ರಂಗದಲ್ಲಿ ಗಮನಾರ್ಹ ಸಾಧನೆಗಳೊಂದಿಗೆ ಮುಂದುವರಿಯುತ್ತಿರುವ ನೂರುಲ್ ಹುದಾ ಸಂಸ್ಥೆಯು ಕರುನಾಡಿನ ಜನರ ಕನಸಿಗೆ ರೆಕ್ಕೆ ಕಟ್ಟುವ ಪ್ರಯತ್ನಕ್ಕೆ ಮುಂದಾಗಿದೆ. ದಶವಾರ್ಷಿಕೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಸಮರ್ಪಕ ವಾದ ಗುರಿಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಇನ್ನಷ್ಟು ಸಶಕ್ತಗೊಳಿಸಿ, ಯೋಜನೆಗಳನ್ನು ಆವಿಷ್ಕರಿಸಲಾಗಿದೆ. ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕವಾಗಿ ಸಬಲೀಕರಣ ಗೊಳಿಸುವ ನಿಟ್ಟಿನಲ್ಲಿ ಪೂರಕ ಶೈಕ್ಷಣಿಕ ಗುಣಮಟ್ಟ ವನ್ನು ಕ್ರಮೀಕರಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶುಭ ಹಾರೈಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಜನಪ್ರತಿನಿಧಿಗಳ ಕೆಡುಕು ಗಳನ್ನು ಪ್ರಶ್ನಿಸುವ, ಒಳಿತನ್ನು ಪ್ರೋತ್ಸಾಹಿಸುವ ಪ್ರಬುದ್ಧ ನವತಲೆಮಾರುಗಳ ಸೃಷ್ಟಿ ಮಾಡುವಲ್ಲಿ ನೂರುಲ್ ಹುದಾ ಸಂಸ್ಥೆಯು ಯಶಸ್ವಿಯಾಗಿದೆ. ಈಗಾಗಲೇ ಹಲವು ಬಾರಿ ಇಲ್ಲಿನ ವಿದ್ಯಾರ್ಥಿಗಳ ಜೊತೆ ಸಂವಹನ ಮಾಡುವ ಅವಕಾಶ ಲಭಿಸಿದಾಗಲೆಲ್ಲ ಮುಂದಿನ ತಲೆಮಾರುಗಳ ಆತಂಕವನ್ನು ವ್ಯಕ್ತಪಡಿಸುವ ಹಾಗೂ ಪರಿಹಾರಗಳ ಬಗ್ಗೆ ಚರ್ಚಿಸುವ ಪ್ರಯತ್ನಗಳು ನಡೆದಿತ್ತು ಎಂದು ಹೇಳಿದರು.
ದಾರುಲ್ ಹುದಾ ಇಸ್ಲಾಮಿಕ್ ಯೂನಿವರ್ಸಿಯ ಕುಲಪತಿ ಪಾಣಕ್ಕಾಡ್ ಸೈಯ್ಯದ್ ಸಾದಿಖಲಿ ಶಿಹಾಬ್ ತಂಙಳ್ ಅವರು ವರ್ಚುವಲ್ ಆಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ವಹಿಸಿಕೊಂಡರು.
ದಾರುಲ್ ಹುದಾ ಇಸ್ಲಾಮಿಕ್ ಯೂನಿವರ್ಸಿಯ ಪ್ರ. ಕಾರ್ಯದರ್ಶಿ ಯು.ಎಂ. ಶಾಫಿ ಹಾಜಿ ಶುಭ ಹಾರೈಸಿದರು. ಮಾಡನ್ನೂರು ಖತೀಬ್ ನೌಶಾದ್ ಫೈಖಿ ಸಿದ್ದಾಪುರ ಅವರು ಝಿಯಾರತ್ ಗೆ ನೇತೃತ್ವ ನೀಡಿದರು.
ನೂರುಲ್ ಹುದಾ ಸಂಸ್ಥೆಯ ದಶಮಾನೋತ್ಸವದ ಕಾರ್ಯಕ್ರಮದ ಸಮಾರೋಪ ಮಹಾ ಸಮ್ಮೇಳನ ಹಾಗೂ ಪದವಿ ಪ್ರದಾನ ಸಮಾರಂಭವು 2024 ಡಿಸೆಂಬರ್ 5,6,7ರಂದು ನಡೆಸುವುದಾಗಿ ನೂರಲ್ ಹುದಾ ರಕ್ಷಾಧಿಕಾರಿ ಪಾಣಕ್ಕಾಡ್ ಸೈಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಘೋಷಿಸಿದರು. ನಂತರ ಮಾತನಾಡಿದ ಅವರು ಸಮನ್ವಯ ಶಿಕ್ಷಣ ರಂಗದಲ್ಲಿ ಕರುನಾಡಿನ ಜನರ ಬಹುದೊಡ್ಡ ಭರವಸೆಯಾಗಿ ಮೂಡಿದ್ದು, ಇದರ ಮುಂದಿನ ಯಶಸ್ವಿ ಪ್ರಯಾಣದಲ್ಲಿ ಎಲ್ಲರ ಸಹಕಾರ ವಿರಲಿ ಎಂದು ಕೋರಿಕೊಂಡರು.
ಕ್ಯಾಂಟೀನ್ ಉದ್ಘಾಟನೆ
ನೂರುಲ್ ಹುದಾ ಯುಎಇ ಸಮಿತಿಯ ಸಹಕಾರದೊಂದಿಗೆ ನಿರ್ಮಿಸಲಾದ ಅತಿ ವಿಶಾಲವಾದ ಕ್ಯಾಂಟೀನ್ ಅನ್ನು ಪಾಣಕ್ಕಾಡ್ ಸೈಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಸ್ತ ಉಲಮಾ ಒಕ್ಕೂಟದ ಉಪಾಧ್ಯಕ್ಷರಾದ ಯು.ಎಂ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಶುಹದಾ ಎಕ್ಸಲೆನ್ಸ್ ಅವಾರ್ಡ್
ನೂರುಲ್ ಹುದಾ ದಶಮಾನೋತ್ಸವದ ಅಂಗವಾಗಿ ಘೋಷಿಸಲ್ಪಟ್ಟ “ಶುಹದಾ ಎಕ್ಸಲೆನ್ಸ್ ಅವಾರ್ಡ್ ಅನ್ನು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಪಾಣಕ್ಕಾಡ್ ಸೈಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಅವರು ಪ್ರದಾನಿಸಿದರು. ಅಲ್ಲದೆ ಆಡಳಿತ ಸಮಿತಿ ಪದಾಧಿಕಾರಿಗಳು ಅಭಿನಂದನ ಪತ್ರ ಮತ್ತು ನಗದು ಬಹುಮಾನವನ್ನು ನೀಡಿದರು.
ಸನ್ಮಾನ - ಗೌರವ
ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ನೂರುಲ್ ಹುದಾ ಯುಎಇ ಸಮಿತಿಗೆ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸ್ಮರಣಿಕ ನೀಡಿ ಗೌರವಿಸಿದರು. ಈ ಸಂದರ್ಭ ಯುಎಇ ರಕ್ಷಾಧಿಕಾರಿ ಯೂಸುಫ್ ಹಾಜಿ ಮೇನಾಲ ಹಾಜರಿದ್ದರು. ಅಲ್ಲದೆ ಸಂಸ್ಥೆಯ ವಿವಿಧ ಯೋಜನೆಗಳ ಜವಾಬ್ದಾರಿ ವಹಿಸಿಕೊಂಡ ಬುಶ್ರಾ ಅಬ್ದುಲ್ ಅಝೀಝ್, ಒಮೇಗಾ ಮುಹಮ್ಮದ್ ಹಾಜಿ ಮುಂಡೋಳೆ, ಇಕ್ಬಾಲ್ ಕೋಲ್ಪೆ, ಬಶೀರ್ ನೆಲ್ಲಿಹುದಿಕೇರಿ, ಆರ್ಕಿಟಕ್ಚರ್ ಎನ್ ವಿ ಅಶ್ರಫ್, ಅನಸ್ ಬಾಬು, ಕುಞಿ ಅಹ್ಮದ್ ಹುದವಿ ಅವರನ್ನು ಸನ್ಮಾನಿಸಲಾಯಿತು.
ಕರೀಂ ಹಾಜಿ ಹಾನಗಲ್, ಎಂ.ಎಚ್. ನಾಸೀರ್ ದೇಲಂಪಾಡಿ, ಪ್ರೆಸ್ಟೇಜ್ ಉದ್ಯಮದ ಶಂಸುದ್ದೀನ್, ಶಾಝ್, ಕೊಡಗು ಯಾಕೂಬ್, ಇಸ್ಹಾಕ್ ಹಾಜಿ ಪಾಜಪಲ್ಲ ಅವರನ್ನು ಗೌರವಹಿಸಲಾಯಿತು.
ಕೃತಿಗಳ ಬಿಡುಗಡೆ
ಚಿಗುರು ವಿಶೇಷ ಸಂಚಿಕೆ ಮತ್ತು ಸಂಸ್ಥೆಯ ವಿದ್ಯಾರ್ಥಿ ಸಫಾದ್ ಅನುವಾದಿಸಿದ, ಚಿಗುರು ಪಬ್ಲಿಕೇಶನ್ ಹೊರತಂದ ‘ಮರಣೋತ್ತರ ಸಂಚಾರ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಸಮಸ್ತ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ಲ ಫೈಝಿ ಕೊಡಗು, ಶೈಖುನಾ ತೋಡಾರು ಉಸ್ಮಾನುಲ್ ಫೈಝಿ, ಸೈಯ್ಯದ್ ಹುಸೈನ್ ತಂಙಳ್ ಮಾಸ್ತಿಕುಂಡ್, ಸೈಯ್ಯದ್ ಸೈಯ್ಯದ್ ಬುರ್ಹಾನ್ ಅಲಿ ತಂಙಳ್, ಸಾಲ್ಮರ ಹಾದಿ ತಂಙಳ್, ಹಮೀದ್ ದಾರಿಮಿ ಸಂಪ್ಯ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಶಂಸುದ್ದೀನ್ ದಾರಿ ಪಮ್ಮಲ ಹೇಮನಾಥ ಶೆಟ್ಟಿ, ಎಲ್. ಟಿ ರಝಾಕ್ ಹಾಜಿ, ಮಂಗಲ ಅಬೂಬಕ್ಕರ್ ಹಾಜಿ, ಹಿರಾ ಖಾದರ್ ಹಾಜಿ, ಸಿ.ಎಚ್. ಅಝೀಝ್ ಹಾಜಿ, ಎನ್.ಎಸ್. ಅಬ್ದುಲ್ಲ ಹಾಜಿ, ಅಬ್ದುಲ್ ಖಾದರ್ ಬಯಂಬಾಡಿ, ಎನ್. ಖಾದರ್ ಮುಸ್ಲಿಯಾರ್, ಇಸ್ಮಾಯೀಲ್ ಹಾಜಿ ನೆಕ್ಕರ್, ಇಬ್ರಾಹಿಂ ಹಾಜಿ ಕತ್ತರ್, ಉಮರ್ ಹಾಜಿ ಉಪ್ಪಿನಂಗಡಿ, ಬಿ.ಎಂ. ಅಬ್ದುಲ್ಲ ಮಾಡನ್ನೂರು, ಸಿ.ಕೆ. ದಾರಿಮಿ, ಫಾರೂಕ್ ದಾರಿಮಿ, ಕರೀಂ ದಾರಿಮಿ ಕುಂಬ್ರ, ಸಿದ್ದೀಕ್ ಫೈಝಿ ಕರಾಯ, ಅಲಿ ಉಸ್ತಾದ್ ಬನ್ನೂರು, ಎಂ.ಡಿ. ಹಸೈನಾರ್, ಸಿಟಿ ಹಸನ್ ಹಾಜಿ, ತಾಜ್ ಮುಹಮ್ಮದ್, ಅಶ್ರಫ್ ಹಾಜಿ ಪಲ್ಲತ್ತೂರು, ನಾಸಿರ್ ಬೆಳ್ಳಾರೆ, ಶರೀಫ್ ಪರ್ಪುಂಜ, ಶಫೀವುಲ್ಲಾ ಕಡಬ, ಇಸ್ಹಾಕ್ ಪಡೀಲ್, ಫ್ಯಾಮಿಲಿ ಅಬ್ದುಲ್ ಹಮೀದ್, ಕೆ.ಕೆ. ಇಬ್ರಾಹೀಂ, ಹಂಝ ಸಾಲ್ಮರ, ಉಸ್ಮಾನ್ ಬಯಂಬಾಡಿ, ರಶೀದ್ ಹಾಜಿ ಪರ್ಲಡ್ಕ, ಹುಸೈನ್ ಮಾಡಾವು, ಸಿ.ಎಚ್. ಅಬ್ದುಲ್ಲ ಕಾವು, ಬಿ.ಕೆ. ಅಬ್ದುಲ್ಲ, ಖಾಲಿದ್ ಬಿ.ಎಂ., ಸಿ.ಕೆ. ಹಸೈನಾರ್, ಫಕ್ರುದ್ದೀನ್ ಹಾಜಿ ಕೊಯ್ಲ, ಇದ್ದೀನ್ ಕುಞಿ, ಸಿ.ಎ. ಖಾದರ್ ಹಾಜಿ ಅಮ್ಚಿನಡ್ಕ, ಮುಹಮ್ಮದ್ ಬಡಗನ್ನೂರು, ನವಾಝ್ ಪರ್ಪುಂಜ, ಅಬೂಬಕ್ಕರ್ ಕಲ್ಲರ್ಪೆ, ಹುಸೈನ್ ಗಾರ್ಬಲ್, ಅರ್ಶಫ್ ಮುಕ್ವೆ, ಸುಲೈಮಾನ್ ಕೊಡ್ಲಿಪೇಟೆ, ಬಾಶಿತ್ ಹಾಜಿ ಕೊಡ್ಲಿಪೇಟೆ, ಅಬ್ದುಲ್ಲ ಫ್ಲೈಕೂರ್ಗ್ ಸೇರಿದಂತೆ ವಿವಿಧ ಉಲಮಾ-ಉಮರಾ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೂರುಲ್ ಹುದಾ ವ್ಯವಸ್ಥಾಪಕರಾದ ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ ಸ್ವಾಗತಿಸಿ, ಸಂಸ್ಥೆಯ ಪ್ರಾಧ್ಯಾಪಕರಾದ ರಾಶಿದ್ ಹುದವಿ ವಂದಿಸಿದರು. ಪಿಆರ್ ಒ ಯೂಸುಫ್ ಮುಂಡೋಳೆ, ಶಮಿ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು.