ಪುಂಜಾಲಕಟ್ಟೆ: ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಪುಂಜಾಲಕಟ್ಟೆ: ಬದ್ರಿಯಾ ಜುಮಾ ಮಸೀದಿ ಪುಂಜಾಲಕಟ್ಟೆಯಲ್ಲಿ ಈದುಲ್ ಫಿತ್ರ್ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ನಡೆದ ಸಾಮೂಹಿಕ ಈದ್ ನಮಾಝ್ ಖತೀಬ್ ಇಸ್ಮಾಯಿಲ್ ಫೈಝಿ ನೇತೃತ್ವದಲ್ಲಿ ನಡೆಯಿತು.
ಈದುಲ್ ಫಿತ್ರ್ ಆಚರಣೆಯು ವಿಶ್ವಾಸಿಗಳ ಪಾಲಿಗೆ ಬಹು ಪ್ರಮುಖ ಆಚರಣೆಯಾಗಿದೆ. ಈ ದಿನ ಮುಸ್ಲಿಮರು ಕುಟುಂಬ ಸಂಬಂಧವನ್ನು ಬಲಪಡಿಸುವ ಕಾರ್ಯ ಮಾಡಬೇಕು ಎಂದು ಇಸ್ಮಾಯಿಲ್ ಫೈಝಿ ಈದ್ ಸಂದೇಶದಲ್ಲಿ ಹೇಳಿದರು.
ಮಾತ್ರವಲ್ಲ ಜಗತ್ತಿನಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪನೆಯಾಗಲಿ ಎಂದು ಶುಭ ಹಾರೈಸಿದರು.
ಈದ್ ನಮಾಝ್ ನಂತರ ಖಬರ್ ಝಿಯಾರತ್ ಮಾಡಿ ದುವಾ ಮಾಡಲಾಯಿತು.
Next Story