ಡಿ.16ರಂದು ‘ಬರಕ ಎಕ್ಸ್‌ಪ್ಲೋರಿಯ’ ಪ್ರದರ್ಶನ
ಮಂಗಳೂರು, ಡಿ.14: ಅಡ್ಯಾರ್ ನ ಬರಕ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಡಿ. 16ರಂದು ಬರಕ ಎಕ್ಸ್‌ಪ್ಲೋರಿಯ ಎಂಬ ಪ್ರದರ್ಶನವನ್ನು ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಿಂಡರ್‌ಗಾರ್ಟನ್‌ನಿಂದ ಪದವಿವರೆಗಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶನ ಹಾಗೂ ಸ್ವ ಪರಿಶ್ರಮದಿಂದ ತಯಾರಿಸಿದ ಮಾದರಿ ಹಾಗೂ ಆಟಗಳನ್ನು ಪ್ರದರ್ಶಿವ ಕಾರ್ಯಕ್ರಮವಾಗಿದೆ. ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಈ ಪ್ರದರ್ಶನ ನಡೆಯಲಿದೆ ಎಂದರು.
ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಭಾಷಾ ವಿಷಯಗಳ ಕುರಿತು ಆಕರ್ಷಕ ಹಾಗೂ ವಿಶೇಷ ಚಟುವಟಿಕೆಗಳು, ಮದರಂಗಿ ಕೌಂಟರ್, ನಮ್ಮ ಊರ ವಿಶೇಷತೆಗಳು, ಕುರ್ʼಆನ್ ಹಾಗೂ ವಿಜ್ಞಾನ, ಹಿಜಾಮ, ಹಜ್ ಟೂರ್, ಚಂದ್ರಯಾನ ಉಡಾವಣೆ ಕಿರುನೋಟ ಮೊದಲಾದ ಪ್ರದರ್ಶನದ ಜತೆ ವಿದ್ಯಾರ್ಥಿಗಳಿಂದ ವೇದಿಕೆಯಲ್ಲಿ ಕರಾಟೆ, ಮೋಜಿನ ಆಟಗಳ ಪ್ರದರ್ಶನವೂ ನಡೆಯಲಿದೆ ಎಂದು ಅವರು ವಿವರಿಸಿದರು.
ಕಿಂಡರ್‌ಗಾರ್ಟನ್‌ನಿಂದ ಪಿಯುಸಿವರೆಗೆ ಸಿಬಿಎಸ್‌ಸಿ ಪಠ್ಯಕ್ರಮದಡಿ ಶಿಕ್ಷಣ ನೀಡಲಾಗುತ್ತಿದ್ದು, ಒಟ್ಟು 1200ರಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಪ್ರಮುಖರಾದ ಮುಹಮ್ಮದ್ ಹನೀಫ್, ಶಕೀಬ್ ಶರೀಫ್ ಉಮ್ರಿ, ಮುಹಮ್ಮದ್ ಅಯಾನ್, ಶಮೀರ್ ಉಪಸ್ಥಿತರಿದ್ದರು.