ಫರಂಗಿಪೇಟೆ : ಪುದು ಗ್ರಾ.ಪಂ. ಉಪ ಚುನಾವಣೆ, ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ

ಬಂಟ್ವಾಳ : ಪುದು ಗ್ರಾ.ಪಂ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಪಾಡಿ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಫರಂಗಿಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಾಗಿದ್ದ ಹುಸೇನ್ ಪಾಡಿ ಅವರು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಅವರ ಸ್ಥಾನವನ್ನು ಅವರ ಪುತ್ರ ಇಕ್ಬಾಲ್ ಅವರು ತುಂಬಿದ್ದಾರೆ. ಪ್ರಸ್ತುತ ವಿಧಾನಸಭಾ ಸ್ಪೀಕರ್ ಆಗಿರುವ ಶಾಸಕ ಯು.ಟಿ.ಖಾದರ್ ಅವರ ಅಭಿವೃದ್ಧಿ ಕಾರ್ಯ, ಗ್ರಾ.ಪಂ.ನ ಆಡಳಿತವನ್ನು ಮೆಚ್ಚಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಬೆಂಬಲಿಸಿದ್ದಾರೆ ಎಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಪ್ರತಿ ಚುನಾವಣೆಯ ಸಂದರ್ಭದಲ್ಲೂ ವಿರೋಧ ಪಕ್ಷಗಳಾದ ಬಿಜೆಪಿ, ಎಸ್‌ಡಿಪಿಐ ಗಳ ಮತಗಳ ಸಂಕ್ಯೆ ಕಡಿಮೆಯಾಗುತ್ತಿದ್ದು, ಈ ಬಾರಿ ಠೇವಣಿಯನ್ನೇ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದೆ ಎಂದರು.
ವಿಜೇತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಅವರು ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಅರ್ಪಿಸಿದರು.
ಪುದು ಗ್ರಾಮ.ಪಂ. ಅಧ್ಯಕ್ಷೆ ರಶಿದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸಜೀರು, ಸದಸ್ಯೆ ರೆಹನಾ, ವಲಯ ಕಾಂಗ್ರೆಸ್ ಅಧ್ಯಕ್ಷ ದಿಲ್‌ಶಾನ್ ಪೇರಿಮಾರ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ತೌಶೀಫ್ ವಳಚ್ಚಿಲ್, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೆರಿಮಾರ್, ಪ್ರಮುಖರಾದ ಹಕೀಂ ಮಾರಿಪಳ್ಳ, ಕೆರೀಂ ಮಾರಿಪಳ್ಳ, ಫಯಾಜ್ ಮಾರಿಪಳ್ಳ, ಇರ್ಶಾದ್ ಪಾಡಿ, ಇಬ್ರಾಹಿಂ ಮಾರಿಪಳ್ಳ, ಘಣಿ ಮಾರಿಪಳ್ಳ, ಐ.ಎಸ್.ಇಮ್ರಾನ್, ಸಲೀಂ ಮಲ್ಲಿ ಮೊದಲಾದವರು ಉಪಸ್ಥಿತರಿದ್ದರು.