ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನ ವಾರ್ಷಿಕೋತ್ಸವ ಪ್ರಯುಕ್ತ ಅನ್ನದಾನ
ಮಂಗಳೂರು, ನ.29: ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದರ 25ನೇ ವಾರ್ಷಿಕೋತ್ಸವ ಹಾಗೂ ನಗರದ ಕಂಕನಾಡಿಯಲ್ಲಿರುವ ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯ 9ನೇ ವಾರ್ಷಿಕೋತ್ಸವವನ್ನು ಬಿಜೈಯಲ್ಲಿರುವ ಸ್ನೇಹದೀಪ ಆಶ್ರಮದಲ್ಲಿ ಮಕ್ಕಳಿಗೆ ಅನ್ನದಾನ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭ ಸ್ನೇಹ ದೀಪದ ನಿರ್ದೇಶಕಿ ತಬಸ್ಸುಮ್ ಮಾತನಾಡಿ, ಚಿನ್ನಾಭರಣದ ಸಂಸ್ಥೆಯೊಂದು ವಾರ್ಷಿಕೋತ್ಸವವನ್ನು ಆಶ್ರಮದ ಮಕ್ಕಳೊಂದಿಗೆ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದೆ. ಈ ಮಳಿಗೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ. ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Next Story