ಪುತ್ತೂರು ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಅಸ್ತಿತ್ವಕ್ಕೆ: ನೂತನ ಪದಾಧಿಕಾರಿಗಳ ಆಯ್ಕೆ
ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ, ಅಬ್ದುಲ್ ಅಝೀಝ್ ಮಿಸ್ಬಾಹಿ, ಯೂಸುಫ್ ಗೌಸಿಯಾ ಸಾಜ
ಪುತ್ತೂರು: ತಾಲೂಕಿನ ವಿವಿಧ ಮೊಹಲ್ಲಾಗಳ ಪ್ರತಿನಿಧಿಗಳ ಸಮಾವೇಶವು ಇತ್ತೀಚೆಗೆ ಪುತ್ತೂರು ಪ್ರೆಸ್ಟೀಜ್ ಸಭಾಂಗಣದಲ್ಲಿ ನಡೆದು ನೂತನ ಪುತ್ತೂರು ಸುನ್ನೀ ಸಂಯುಕ್ತ ಜಮಾಅತ್ ಅಸ್ತಿತ್ವಕ್ಕೆ ತರಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್ (ಮಂಜ ಮರ್ಕಝ್) ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಿಲ, ಕೋಶಾಧಿಕಾರಿಯಾಗಿ ಯೂಸುಫ್ ಗೌಸಿಯಾ ಸಾಜ ಅವರನ್ನು ಆರಿಸಲಾಯಿತು.
ಊಪಾಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಹಸನ್ ನಗರ, ಕೊಡಿಪ್ಪಾಡಿ, ಸಿಎಂ ಅಬೂಬಕರ್ ಕರ್ನೂರ್, ಕಾರ್ಯದರ್ಶಿಗಳಾಗಿ ಅಬೂ ಶಝ ಅಬ್ದುಲ್ ರಝಾಖ್ ಖಾಸಿಮಿ ಕೂರ್ನಡ್ಕ, ಸ್ವಾಲಿಹ್ ಮುರ, ಸಂಚಾಲಕರಾಗಿ ದಾವೂದ್ ಅಶ್ರಫಿ ಅಳಕೆಮಜಲು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಲಾಹುದ್ದೀನ್ ಸಖಾಫಿ ಮಾಡನ್ನೂರ್, ಇಕ್ಬಾಲ್ ಬಪ್ಪಳಿಗೆ, ಸಲೀಂ ಸಅದಿ ಕಾರ್ಯಾಡಿ, ಅಬ್ದುಲ್ ಹಮೀದ್ ಕೊಯಿಲ, ಯೂಸುಫ್ ಬೀಟಿಗೆ, ಹಸೈನಾರ್ ಹಸನ್ ನಗರ, ಆದಂ ಕೆ. ಪಿ., ಸುಲೈಮಾನ್ ಮಿಸ್ಬಾಹಿ, ಕೆ ಎಚ್ ಇಸ್ಮಾಯಿಲ್ ಕುಕ್ಕಾಜೆ, ಎ ಎಂ ರಫೀಕ್, ಜಲೀಲ್ ಸಖಾಫಿ ಕರ್ನೂರ್, ರವೂಫ್ ಹಾಶಿಮಿ ಮೈದಾನಿಮೂಲೆ, ಬಿಎ ಹಮೀದ್ ಬೀಟಿಗೆ, ಕೆ ಯೂಸುಫ್ ಕರಿಮಜಲ್, ಅಬ್ದುಲ್ ಮಜೀದ್ ಬನ್ನೂರು, ಟಿ ಮುಹಮ್ಮದ್ ಕಾರ್ಯಾಡಿ, ಮುಹಮ್ಮದ್ ಕುಂಞಿ ಹಸನ್ ನಗರ್, ಮುಹಮ್ಮದ್ ಹಾಜಿ ಸಾರ್ಯ, ಇಬ್ರಾಹಿಂ ಝುಹ್ರೀ ಕುಕ್ಕಾಜೆ, ಶರೀಫ್ ಸಖಾಫಿ ಅಳಕೆಮಜಲು, ಉಮರ್ ಫಾರೂಕ್ ಬುಳೆರಿಕಟ್ಟೆ, ಅಬ್ದುಲ್ಲ ಕುಂಞಿ ಸಾರ್ಯ, ಅಬೂಬಕರ್ ನರಿಮೊಗರು, ಶಾಹುಲ್ ಹಮೀದ್ ಕಬಕ, ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರ್, ಎ ಕೆ ಅಬ್ದುಲ್ ಹಮೀದ್ ಸಾಜ ಅವರನ್ನು ಆರಿಸಲಾಯಿತು.
ಸಲಹೆಗಾರರಾಗಿ ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ಊದ್ ಅಲ್ ಬುಖಾರಿ ಕೂರತ್, ಬಿ. ಕೆ. ಮುಹಮ್ಮದ್ ಅಲಿ ಫೈಝಿ ಸಂಪ್ಯ, ಹಂಝ ಮುಸ್ಲಿಯಾರ್ ಈಶ್ವರಮಂಗಲ, ಪಿ.ಎಂ. ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಯ್ಯಿದ್ ಶಿಹಾಬುದ್ದೀನ್ ಮದಕ ತಂಙಳ್ ದುಆ ನೆರವೇಸಿದರು. ಪುತ್ತೂರು ಝೋನ್ ಸುನ್ನಿ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಹಂಝ ಮುಸ್ಲಿಯಾರ್ ಈಶ್ವರಮಂಗಲ ಅಧ್ಯಕ್ಷತೆ ವಹಿಸಿದರು. ಎಸ್ ಎಂ ಎ ರಾಜ್ಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಉದ್ಘಾಟಿಸಿದರು. ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಿಲ, ಅಬೂ ಶಝ ಖಾಸಿಮಿ, ಅಬ್ದುಲ್ ಹಮೀದ್ ಸಖಾಫಿ ಪಾಡಿ, ಅಬ್ದುಲ್ ಖಾದರ್ ಸಖಾಫಿ ಕಡಂಬು ಶುಭ ಹಾರೈಸಿದರು. ಜಿ ಎಂ ಅಬೂಬಕರ್ ಫೈಝಿ ಸುನ್ನಿ ಪೆರುವಾಯಿ ವಂದಿಸಿದರು.