ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಉಚಿತ ವೈದ್ಯಕೀಯ ಶಿಬಿರ
ಮಂಗಳೂರು, ನ.19: ಅಡ್ಯಾರ್ ಸಮೀಪದಲ್ಲಿರುವ ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಲೈಫ್ ಲೈನ್ ಹೆಲ್ತ್ ಕೇರ್ ಫಳ್ನೀರ್ ಹಾಗೂ ಲೆ ಆಪ್ಟಿಕೋ ಅತ್ತಾವರ ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಇಂದು ನಡೆಯಿತು.
ಶಿಬಿರಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮೊಹ್ಸಿರ್ ಅಹ್ಮದ್ ಸಾಮಾನಿಗೆ, ಮೀಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ, ಜಮೀಯ್ಯತುಲ್ ಫಲಹ್ ಉಪಾಧ್ಯಕ್ಷ ಪರ್ವೇಝ್ ಅಲಿ, ಅಖಿಲ ಭಾರತ ಬ್ಯಾರಿ ಪರಿಷತ್ ಉಪಾಧ್ಯಕ್ಷ ಡಾ.ಇ.ಕೆ.ಸಿದ್ದೀಕ್, ಅಡ್ಯಾರ್ ಪಂಚಾಯತ್ ಅಧ್ಯಕ್ಷ ಯಾಸಿನ್ ಅಹ್ಮದ್, ಬಿ-ಹ್ಯೂಮನ್ ಬಹರೈನ್ ಅಧ್ಯಕ್ಷ ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೀಫ್ ಸಂಸ್ಥೆಯನ್ನು ಅಭಿನಂದಿಸಲಾಯಿತು.
ವೈದ್ಯಕೀಯ ಶಿಬಿರದಲ್ಲಿ ಸಾರ್ವಜನಿಕರು ವಿವಿಧ ನೇತ್ರ ತಜ್ಞರು, ದಂತ ವೈದ್ಯರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಮನೋವೈದ್ಯರು, ಸಾಮಾನ್ಯ ವೈದ್ಯಕೀಯ ತಜ್ಞರಿಂದ ವೈದ್ಯಕೀಯ ಉಪಯೋಗ ಪಡೆದುಕೊಂಡರು. ಅಲ್ಲದೆ ಆಪ್ಟಿಕಲ್ ಫ್ರೇಮ್, ಮಧುಮೇಹ ತಪಾಸಣೆ, ಬಿಪಿ. ಇಸಿಜಿ, ಶ್ವಾಸಕೋಶ ಪರೀಕ್ಷೆ ಮೊದಲಾದ ಸವಲತ್ತುಗಳನ್ನು ಉಚಿತವಾಗಿ ಪಡೆದುಕೊಂಡರು.