ಹಿದಾಯ ಫೌಂಡೇಶನ್ ಗ್ಲೋಬಲ್ ಮೀಟ್- 2024 ಕ್ಕೆ ಚಾಲನೆ
ಬಂಟ್ವಾಳ : ಮಂಗಳೂರಿನ ಹಿದಾಯ ಫೌಂಡೇಶನ್ ಇದರ ವಾರ್ಷಿಕ ಗ್ಲೋಬಲ್ ಮೀಟ್ ಕಾರ್ಯಕ್ರಮವು ಕಾವಳಕಟ್ಟೆ ಹಿದಾಯ ಶೇರ್ ಆಂಡ್ ಕೇರ್ ಕಾಲೋನಿಯಲ್ಲಿ ಮಂಗಳವಾರ ಬೆಳಿಗ್ಗೆ ಚಾಲನೆಗೊಂಡಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧಾರ್ಮಿಕ ಉಪನ್ಯಾಸಕ ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಅವರು ಮಾತನಾಡಿ, ಸಮುದಾಯಕ್ಕೆ ಜ್ಞಾನಾಧಾರಿತ ನಾಯಕತ್ವದ ಅವಶ್ಯಕತೆ ಇದ್ದು ಗತಕಾಲದ ಇಸ್ಲಾಂ ವಿದ್ವಾಂಸರು, ಸಂಶೋಧಕರು ಮಾಡಿದ ಸಾಧನೆಯ ಹಾದಿಯಲ್ಲಿ ಸಮುದಾಯ ಸಾಗಿದರೆ ಸಮಾಜದ ಸಮಸ್ಯೆಗಳನ್ನು ಕೊನೆ ಗಾಣಿಸಬಹುದು ಮಾತ್ರವಲ್ಲ, ಮಾದರಿಯಾಗಿ ಬದಲಾಗಬಹುದು ಎಂದು ಅಭಿಪ್ರಾಯಪಟ್ಟರು.
ಚಾಲನಾ ಅವಧಿಯಲ್ಲಿ ಸಂಸ್ಥೆಯ ವಾರ್ಷಿಕ ಚಟುವಟಿಕೆಗಳ ಸಂಗ್ರಹದ ಸಂಚಿಕೆಯನ್ನು ಸಂಸ್ಥೆಯ ಚೇರ್ಮನ್ ಹಾಜಿ ಮನ್ಸೂರ್ ಅಹಮದ್ ಆಝಾದ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ, ಕೋಶಾಧಿಕಾರಿ ಬಿ.ಎಂ.ಶರೀಫ್ ಬೋಳಾರ್, ಆಡಳಿತಾಧಿಕಾರಿ ಆಬಿದ್ ಅಸ್ಗರ್, ಸ್ಥಾಪಕ ಅಧ್ಯಕ್ಷ ಖಾಸಿಂ ಆಹ್ಮದ್, ಅಬ್ದುಲ್ಲಾ ಮೋನು ಖತಾರ್, ತನ್ವೀರ್ ಅಹಮದ್, ಅಸ್ಕಾಫ್ ಅಹಮದ್ , ಅಹಮದ್ ಬಾವಾ ಮೊದಲಾದವರು ಉಪಸ್ಥಿತರಿದ್ದರು.
ಇಂದೇ ವೇಳೆ ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಅವರನ್ನು ಸನ್ಮಾನಿಸಲಾಯಿತು.
ಮೊಹಮ್ಮದ್ ಹನೀಫ್ ಹಾಜಿ ಸ್ವಾಗತಿಸಿ, ಹಕೀಂ ಕಲಾಯಿ ವಂದಿಸಿದರು. ಆಶಿಕ್ ಕುಕ್ಕಾಜೆ ಖಿರಾಅತ್ ಪಠಿಸಿದರು, ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.