ಇನ್ ಲ್ಯಾಂಡ್ ಬಿಲ್ಡರ್ಸ್ ನ ನೂತನ ವಸತಿ ಸಮುಚ್ಚಯ 'ಬ್ಯೂನಸ್ ಐರಿಸ್' ಉದ್ಘಾಟನೆ

ಮಂಗಳೂರು, ಎ.25: ಇನ್ ಲ್ಯಾಂಡ್ ಬಿಲ್ಡರ್ಸ್ ಮಂಗಳೂರಿನ ಬೆಂದೂರು ಲೋಬೊ ಲೇನ್ ನಲ್ಲಿ ನಿರ್ಮಿಸಿರುವ ನೂತನ ವಸತಿ ಸಮುಚ್ಚಯ 'ಇನ್ ಲ್ಯಾಂಡ್ ಬ್ಯೂನಸ್ ಐರಿಸ್' ಶುಕ್ರವಾರ ಉದ್ಘಾಟನೆಗೊಂಡಿತು.
ಸೈಂಟ್ ಸೆಬಾಸ್ಟಿಯನ್ ಚರ್ಚ್ ನ (ವಿಕಾರ್) ಧರ್ಮಗುರು ವಂ.ವಾಲ್ಟರ್ ಡಿಸೋಜ ಆಶೀರ್ವಚನದೊಂದಿಗೆ ಪ್ರಾರ್ಥನೆ ನೆರವೇರಿಸಿದರು. ಅರ್ಚಕ ಗಿರಿಧರ ಭಟ್ ಗಣಹೋಮ ನೆರವೇರಿಸಿದರು. ಮೌಲಾನ ಮುಹಮ್ಮದ್ ಕಾಮಿಲ್ ಸಖಾಫಿ ದುಆ ನೆರವೇರಿಸಿದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಇನ್-ಲ್ಯಾಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್, ಇನ್ ಲ್ಯಾಂಡ್ ಬ್ಯೂನಸ್ ಐರಿಸ್ 36 ಅಪಾರ್ಟ್ ಮೆಂಟ್ ಗಳನ್ನು ಒಳಗೊಂಡಿದೆ ಮತ್ತು ಯೋಜನೆಯು ಸಂಪೂರ್ಣವಾಗಿ ಮಾರಾಟವಾಗಿದೆ ಎಂದರು.
ನಗರದ ಸೈಂಟ್ ಸೆಬಾಸ್ಟಿಯನ್ ಚರ್ಚ್ ಮತ್ತು ಸೈಂಟ್ ಆ್ಯಗ್ನೆಸ್ ಕಾಲೇಜಿನ ಎದುರು ಬೆಂದೂರಿ ನಲ್ಲಿರುವ ಲೋಬೊ ಲೇನ್ ನಲ್ಲಿ ನೆಲೆಗೊಂಡಿರುವ ಇನ್ ಲ್ಯಾಂಡ್ ಬ್ಯೂನಸ್ ಐರಿಸ್ ಪ್ರಮುಖ ಶಾಲೆಗಳು, ಶಾಪಿಂಗ್ ಕೇಂದ್ರಗಳು, ಪೂಜಾ ಸ್ಥಳಗಳ ಹತ್ತಿರದಲ್ಲೇ ಇದೆ. ಸಾರಿಗೆ ಆಯ್ಕೆಗಳಿಗೆ ತ್ವರಿತ ಪ್ರವೇಶವನ್ನು ಹೊಂದಿರುವ ನಗರದ ಅತ್ಯುತ್ತಮ ಸೌಲಭ್ಯಗಳು ಹತ್ತಿರದಲ್ಲೇ ಇವೆ.. ಹಚ್ಚ ಹಸುರಿನ ಸ್ಥಳವು ಮಾಲಿನ್ಯಮುಕ್ತವಾಗಿದ್ದು, ಇಡೀ ಕುಟುಂಬ ಜೀವನಶೈಲಿಗೆ ಸೂಕ್ತವಾಗಿದೆ. ಈ ಯೋಜನೆ ಎಲ್ಲಾ ಪ್ರಮುಖ ಸೌಲಭ್ಯಗಳನ್ನು ಹೊಂದಿವೆ ಎಂದು ಸಿರಾಜ್ ಅಹ್ಮದ್ ತಿಳಿಸಿದ್ದಾರೆ.
ಇನ್-ಲ್ಯಾಂಡ್ ಸಂಸ್ಥೆಯ ಹೊಸ ಯೋಜನೆಗಳು ಮಂಗಳೂರಿನ ಬೆಂದೂರ್, ಮಣ್ಣಗುಡ್ಡ, ಬೊಂದೇಲ್ ಮತ್ತು ಶೀಘ್ರದಲ್ಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ನಿರ್ಮಾಣವಾಗಲಿದೆ ಎಂದರು.
ಸಮಾರಂಭದ ವೇದಿಕೆಯಲ್ಲಿ ಮನಪಾ ನಿಕಟಪೂರ್ವ ಸದಸ್ಯ ನವೀನ್ ಡಿಸೋಜ, ದಾಯ್ಜಿ ವರ್ಲ್ಡ್ ಸಂಸ್ಥೆಯ ನಿರ್ದೇಶಕ ವಾಲ್ಟರ್ ನಂದಳಿಕೆ, ಇನ್ ಲ್ಯಾಂಡ್ ಸಮೂಹ ಸಂಸ್ಥೆಯ ನಿರ್ದೇಶಕರಾದ ಮೆರಾಜ್ ಯೂಸುಫ್, ವಹಾಝ್ ಯೂಸುಫ್ ಮೊದಲಾದವರು ಉಪಸ್ಥಿತರಿದ್ದರು.