ಜೋಕಟ್ಟೆ ಅಂಜುಮನ್ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು: ಜೋಕಟ್ಟೆ ಅಂಜುಮನ್ ವಿದ್ಯಾ ಸಂಸ್ಥೆ ಯ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಮರ್ ಫಾರೂಕ್ ರವರು ಧ್ವಜಾರೋಹಣಗೈದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಬಿ. ಎ. ರಹೀಂ ರವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ ಸಂಚಾಲಕರಾದ ಹಾಜಿ ಬಿ.ಎಸ್.ಹುಸೈನ್, ಸಂಸ್ಥೆಯ ಉಪ ಸಂಚಾಲಕರಾದ ಅಹಮದ್ ಅಮೀರ್ ಬಾವ ಮತ್ತು ಅಬ್ದುಲ್ ಬಾಸಿತ್, ಸಂಸ್ಥೆಯ ಉಪಾಧ್ಯಕ್ಷ ಒ.ಎಂ ಅಬ್ದುಲ್ ಖಾದರ್, ಸಂಸ್ಥೆಯ ಜೊತೆ ಕಾರ್ಯದರ್ಶಿ ಮೊಹಿಯುದ್ದಿನ್ ಶರೀಫ್, ಹಳೇ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಎಮ್. ಎಮ್ ಹನೀಫ್, ಸಂಸ್ಥೆಯ ಕೋಶಾಧಿಕಾರಿ ಮೊಹಮ್ಮದ್ ರಶೀದ್, ಸಂಸ್ಥೆಯ ಗೌರವ ಸಲಹೆಗಾರರಾದ ಹಾಜಿ ಮೊಹಮ್ಮದ್ ಸಿರಾಜ್ ಮನೆಗಾರ, ಯತೀಂ ಖಾನ ಸಂಚಾಲಕರಾದ ಅಶ್ರಫ್ ಕರಾವಳಿ, ಸಂಸ್ಥೆಯ ಮಾಜಿ ಅಧ್ಯಕ್ಷರಾದ ಹಾಜಿ ಬಿ. ಎ ರಶೀದ್,ಅಂಜುಮನ್ ಪ್ರಾಯೋಜಿತ ಯನೆಪೋಯ ಚಿಕಿತ್ಸಾಲಯದ ಸಂಸ್ಥೆಯ ಸಂಚಾಲಕರಾದ ಸಾಹುಲ್ ಹಮೀದ್ , ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಸಂಶುದ್ದೀನ್, ಇಸ್ಮಾಯಿಲ್, ಮುಖ್ಯೋಪಾಧ್ಯಾಯಿನಿ ವಿನಯ ಮತ್ತು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ದಿವ್ಯಾ ಉಪಸ್ಥಿತರಿದ್ದರು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು ಮತ್ತು ಸಾಧನೆಗೈದ ಶಿಕ್ಷಕರನ್ನು ಗೌರವಿಸಲಾಯಿತು. ಪ್ರಾಂಶುಪಾಲೆ ಮುಶೀಬ ಸ್ವಾಗತಿಸಿದರು. ಉಪನ್ಯಾಸಕಿ ಶರ್ಮಿಳಾ ಕಾರ್ಯಕ್ರಮವನ್ನು ನಿರೂಪಿಸಿದರು.