ಕಾಜೂರು ರಹ್ಮಾನಿಯಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಬೆಳ್ತಂಗಡಿ: ರಹ್ಮಾನಿಯಾ ಜುಮಾ ಮಸ್ಜಿದ್ ಹಾಗೂ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಆಡಳಿತ ಸಮಿತಿ ಹಾಗೂ ಇದರ ಅಧೀನದ ಶಿಕ್ಷಣ ಸಂಸ್ಥೆಗಳಾದ ರಾಹ ಪಬ್ಲಿಕ್ ಸ್ಕೂಲ್, ರಹ್ಮಾನಿಯಾ ಪ್ರೌಢಶಾಲೆ, ದಅವಾ ಕಾಲೇಜು ಮತ್ತು ಮಹಿಳಾ ಶರೀಅತ್ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಬಹು ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವದ ಸಂದೇಶಗಳನ್ನು ಸಾರಿದರು. ರಹ್ಮಾನಿಯಾ ಜುಮಾ ಮಸ್ಜಿದ್ ಹಾಗೂ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಆಡಳಿತ ಸಮಿತಿ ಅಧ್ಯಕ್ಷರಾದ ಜನಾಬ್ ಕೆ ಯು ಇಬ್ರಾಹಿಂ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ದಅವಾ ಕಾಲೇಜು ಮುದರ್ರಿಸರಾದ ತೌಸೀಫ್ ಸಅದಿ ಹರೇಕಳ, ಮದ್ರಸ ಸದರ್ ಉಸ್ತಾದರಾದ ರಹೀಂ ಹನೀಫಿ ಶುಭಕೋರಿದರು.
ಮಲವಂತಿಗೆ ಗ್ರಾಮಪಂಚಾಯತ್ ಸದಸ್ಯರಾದ ಕೆ ಯು ಮೊಹಮ್ಮದ್ , ಆರ್ ಜೆ ಎಂ ದರ್ಗಾ ಶರೀಫ್ ಕಾಜೂರ್ ಮಾಜಿ ಅಧ್ಯಕ್ಷರಾದ ಅಲ್ ಹಾಜ್ ಕೆ ಎಂ ಉಮರ್ ಸಖಾಫಿ ಮಾಜಿ ಕೋಶಾಧಿಕಾರಿ ಅಬ್ಬಾಸ್ ಜೆ ಹೆಚ್, ರಹ್ಮಾನಿಯಾ ಶಿಕ್ಷಣ ಸಂಸ್ಥೆಯಾ ಚೇರ್ಮೆನ್ ಜಿಲ್ಲಾ ವಖಾಫ್ ಸಮಿತಿ ಸದಸ್ಯರು ದರ್ಗಾ ಶರೀಫ್ ಕಾಜೂರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೆ ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಮೊಹಮ್ಮದ್ ಕಮಾಲ್, ಉಪಾಧ್ಯಕ್ಷರಾದ ಬದ್ರುದ್ದೀನ್, ಸದಸ್ಯರಾದ. ಎನ್.ಎಂ ಯಾಕುಬ್ , ಎ ಯು ಮುಹಮ್ಮದ್ ಅಲಿ, ಸಿದ್ದೀಕ್ ಕೆ.ಎಚ್, ಆರ್ ಡಿ ಸಿ ಅಧ್ಯಕ್ಷರಾದ ಶರೀಫ್, ರಾಹ ಪಬ್ಲಿಕ್ ಸ್ಕೂಲ್ ಸಂಚಾಲಕರಾದ ಅಶ್ಫಾಕ್ ,ಶಿಕ್ಷಣ ಸಂಸ್ಥೆಯ ಪ್ರಮುಖರಾದ ನವಾಜ್ ಎನ್.ಎಂ,ಮುಸ್ತಾಫಾ ಡಿ.ಎಚ್ ,ಮಜೀದ್ ಕುಕ್ಕಾವು ಮಹಿಳಾ ಶರೀಅತ್ ಕಾಲೇಜು ಉಪಪ್ರಾಂಶುಪಾಲರಾದ ಅಬ್ದುರ್ರಹ್ಮಾನ್ ಸಅದಿ, ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಸಂಶಾದ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂಸ್ಥೆಯ ಸಹ ಶಿಕ್ಷಕ ಶಿಕ್ಷಕಿಯರು ವ್ಯಸ್ಥಾಪಕರು ಉಪಸ್ಥಿತರಿದ್ದರು.
ಶಿಕ್ಷಕರಾದ ಸಾದಿಕ್ ಮಾಸ್ಟರ್ ಸ್ವಾಗತಿಸಿ, ಜಾಬಿರ್ ಹುಸೈನ್ ಸಖಾಫಿ ವಂದಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಪಸರಿಸುವ ಕಾರ್ಯಕ್ರಮಗಳು ಮೂಡಿಬಂತು. ಸ್ವಾತಂತ್ರೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.