ಪಿ.ಎ. ಕಾಲೇಜಿನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ
ಕೊಣಾಜೆ: ನಡುಪದವಿನ ಪಿ.ಎ. ಫಾರ್ಮಸಿ ಕಾಲೇಜು ವತಿಯಿಂದ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಪೇಸ್ ಆಡಿಟೋರಿಯಂನಲ್ಲಿ ಬಹಳ ವಿಜ್ರಂಭನೆಯಿಂದ ಆಚರಿಸಲಾಯಿತು.
ಪಿ.ಎ. ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ರಮೀಸ್ ಎಂ.ಕೆ. ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರು ತನ್ನ ತ್ಯಾಗ ಪರಿಶ್ರಮದ ಮೂಲಕ ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಬೇಕು. ವೈಜ್ಞಾನಿಕ, ತಂತ್ರಜ್ಞಾನದ ಜೊತೆಗೆ ನ್ಯೆತಿಕವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಉದ್ಧಾರವಾಗಲು ಸಾಧ್ಯ ಎಂದರು.
ಪಿ.ಎ. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸಫ್ರಾಝ್ ಜೆ ಹಾಸಿಂ, ಪಿ.ಎ. ಫಿಸಿಯೋಥೆರಪಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಆಯಿಶ, ಪಿ.ಎ. ಸೆಂಟರ್ ಫಾರ್ ಮನೇಜ್‍ಮೆಂಟ್ ಸ್ಟಡೀಸ್ ಆಂಡ್ ರಿಸರ್ಚ್ ಇದರ ಡೈರಕ್ಟರ್ ಡಾ. ಸಯ್ಯದ್ ಅಮೀನ್ ಮಾತನಾಡಿದರು. ಕಾಲೇಜಿನ ನ್ಯೂಸ್ ಬುಲೆಟಿನ್ "ಅಪೋಸ್ಥಿಕ" ವನ್ನು ಈ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಲಾಯಿತು.
ಪಿ.ಎ. ಪಾಲಿಟೆಕ್ನಿಕ್ ಉಪಪಾಂಶುಪಾಲ ಪ್ರೊ. ಇಸ್ಮಾಯಿಲ್ ಖಾನ್, ಪಿ.ಎ. ಫಾರ್ಮಸಿ ಕಾಲೇಜಿನ ಉಪಪ್ರಾಂಶುಪಾಲ ಡಾ. ಮುಹಮ್ಮದ್ ಮುಬೀನ್ ಉಪಸ್ಥಿತರಿದ್ದರು, ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತ್ರಿವೇಣಿ ಸ್ವಾಗತಿಸಿದರು. ಸಾಹಿಲ್ ಪ್ರಾರ್ಥಿಸಿದರು. ರಮ್ಲತ್ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ವಂದಿಸಿದರು.