ಬ್ಯಾರಿ ಆಶು ಕವನ ಮತ್ತು ಒಗಟು ಸ್ಪರ್ಧೆಗೆ ಆಹ್ವಾನ
ದೇರಳಕಟ್ಟೆ, ಸೆ.19: ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ‘ಮೇಲ್ತೆನೆ’ಯು ಬ್ಯಾರಿ ಆಶು ಕವನ ರಚನೆ ಮತ್ತು ಒಗಟು ಸ್ಪರ್ಧೆಯನ್ನು ಏರ್ಪಡಿಸಿದೆ. ಅಕ್ಟೋಬರ್ 3ರ ಮಧ್ಯಾಹ್ನ 2 ಗಂಟೆಗೆ ದೇರಳಕಟ್ಟೆಯಲ್ಲಿ ಈ ಸ್ಪರ್ಧೆ ನಡೆಯಲಿದೆ. ಆಶು ಕವನ ಸ್ಪರ್ಧೆಗೆ ಬ್ಯಾರಿ ಸಾಹಿತ್ಯ, ಭಾಷೆ, ಸಂಸ್ಕೃತಿ, ಕಲೆಗೆ ಸಂಬಂಧಿಸಿದ ವಿಚಾರವಾಗಿದ್ದು, ಸ್ಥಳದಲ್ಲೇ ವಿಷಯ ನೀಡಲಾಗುವುದು. ಕನಿಷ್ಟ 15 ಮತ್ತು ಗರಿಷ್ಟ 25 ಗೆರೆಗಳ ಮಿತಿಯೊಳಗೆ ಕನ್ನಡ ಲಿಪಿ ಬಳಸಿ ಬ್ಯಾರಿ ಭಾಷೆಯಲ್ಲಿ ಕವನ ರಚಿಸಬೇಕು. ಆ ಬಳಿಕ ಒಗಟು ಸ್ಪರ್ಧೆ ನಡೆಯಲಿದೆ. ಎರಡೂ ಸ್ಪರ್ಧೆಯು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ, ಪ್ರಮಾಣ ಪತ್ರ, ಸ್ಮರಣಿಕೆಯನ್ನು ಅದೇ ದಿನ ಸಂಜೆ 4ಕ್ಕೆ ನಡೆಯುವ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವುದು. ತೀರ್ಪುಗಾರರ ನಿರ್ಣಯ ಮತ್ತು ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಆಸಕ್ತರು ಸೆಪ್ಟಂಬರ್ 28ರೊಳಗೆ ಮೇಲ್ತೆನೆಯ ಮಾಜಿ ಅಧ್ಯಕ್ಷ ಇಸ್ಮಾಯೀಲ್ ಮಾಸ್ಟರ್ (ಮೊ.ಸಂ. 9449902192) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದು ಅಧ್ಯಕ್ಷ ಬಶೀರ್ ಕಲ್ಕಟ್ಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.