ಕೆನರಾ ಕೈಗಾರಿಕಾ ಸಂಘದಿಂದ ಉದ್ಯೋಗ ಮೇಳ
ಮಂಗಳೂರು: ಕೆನರಾ ಕೈಗಾರಿಕಾ ಸಂಘದ ಆಶ್ರಯದಲ್ಲಿ ಬುಧವಾರ ಐಟಿಐ ಮತ್ತು ಡಿಪ್ಲೋಮ ತರಬೇತಿ ಹೊಂದಿರುವರಿಗೆ ನಡೆಸಿದ ಉದ್ಯೋಗ ಮೇಳದಲ್ಲಿ ಸುಮಾರು 500 ಮಿಕ್ಕಿ ಉದ್ಯೋಕಾಂಕ್ಷಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅನೇಕ ಉದ್ಯಮಗಳು ಈ ಮೇಳದಲ್ಲಿ ಭಾಗವಹಿಸಿದವು.
ಸುಮಾರು 300 ಕ್ಕೂ ಮಿಕ್ಕಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಇತರ ಅಭ್ಯರ್ಥಿಗಳನ್ನು ಕಿರುಪಟ್ಟಿಗೆ ಸೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಲಭ್ಯವಿರುವ ಉದ್ಯೋಗಿಗಳಿಗೆ ನೇಮಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದು ಕೆನರಾ ಕೈಗಾರಿಕಾ ಸಂಘದ ಅಧ್ಯಕ್ಷ ಅರುಣ್ ಪಡಿಯಾರ್ ತಿಳಿಸಿದ್ದಾರೆ.
Next Story