ಉದ್ಯೋಗ ಆಮಿಷವೊಡ್ಡಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಸೆ.25: ಆನ್‌ಲೈನ್ ಮೂಲಕ ಉದ್ಯೋಗ ಅವಕಾಶದ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಸೆನ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ತಾನು ಖಾಸಗಿ ಸಂಸ್ಥೆಯಲ್ಲಿ ಟ್ಯೂಟರ್ ಆಗಿದ್ದು, ತನ್ನ ಇಮೇಲ್‌ಗೆ ಉದ್ಯೋಗಾವಕಾಶದ ಬಗ್ಗೆ ಮೆಸೇಜ್ ಬಂದಿತ್ತು. ಆನ್‌ಲೈನ್ ಕೆಮೆಸ್ಟ್ರಿ ಟ್ಯೂಟರ್ ಆಗಿ ಆಯ್ಕೆಯಾಗಿರುವುದಾಗಿ ತಿಳಿಸಲಾಗಿತ್ತು. ನೋಂದಣಿ ಮತ್ತು ವೆಚ್ಚದ ಬಗ್ಗೆ ಹಣ ಪಾವತಿಸುವಂತೆ ಸೂಚಿಸಲಾಗಿತ್ತು. ಅದನ್ನು ನಂಬಿದ ತಾನು 2023ರ ಜು.11ರಿಂದ ಜು.21ರವರೆಗೆ ಹಂತ ಹಂತವಾಗಿ 3,38,096 ರೂ. ಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದೆ. ಆದರೆ ತನಗೆ ಯಾವುದೇ ಉದ್ಯೋಗದ ಬಗ್ಗೆ ಕರೆ ಬರಲಿಲ್ಲ. ಆರೋಪಿಗಳು ನೀಡಿದ ಮೊಬೈಲ್‌ಗೆ ತಾನು ಕರೆ ಮಾಡಿದಾಗ ಆನ್‌ಲೈನ್ ಇಂಟರ್ ವ್ಯೂ ಮಾಡುವುದಾಗಿ ನಂಬಿಸಿದ್ದಾರೆ. ಕೆಲಸದ ಅವಕಾಶ ಸಿಗದಿದ್ದರೆ 45ರಿಂದ 90 ದಿನಗಳ ಒಳಗೆ ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ. ಆದರೆ ಹಣ ಕೊಡದೆ ವಂಚಿಸಿದ್ದಾರೆ ಎಂದು ಸೈಬರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story