ಜೋಡುಪಾಲ| ಭತ್ತ ಸಾಗಾಟದ ಲಾರಿ ಬೆಂಕಿಗಾಹುತಿ
ಸುಳ್ಯ: ಭತ್ತ ಸಾಗಾಟ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಕೊಡಗು ಜಿಲ್ಲೆಯ ಜೋಡುಪಾಲ ಸಮೀಪ ಶನಿವಾರ ತಡರಾತ್ರಿಯಲ್ಲಿ ನಡೆದಿರುವುದು ವರದಿಯಾಗಿದೆ.
ಈ ಲಾರಿ ಎಚ್.ಡಿ. ಕೋಟೆಯಿಂದ ಉಡುಪಿಗೆ ಭತ್ತವನ್ನು ಸಾಗಿಸುತ್ತಿತ್ತೆನ್ನಲಾಗಿದೆ. ಲಾರಿಯು ಜೋಡುಪಾಲ ತಲುಪಿದಾಗ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯನ್ನು ರಸ್ತೆ ಪಕ್ಕ ನಿಲ್ಲಿಸಿ, ಕೆಳಗಿಳಿದು ಪಾರಾಗಿದ್ದಾರೆ.
ಈ ಘಟನೆಯಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
Next Story